»   » ಅಣ್ಣಾವ್ರ ಹುಟ್ಟುಹಬ್ಬಕ್ಕೆ ಆಪರೇಷನ್ ಗೋಲ್ಡನ್ ಗ್ಯಾಂಗ್

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಆಪರೇಷನ್ ಗೋಲ್ಡನ್ ಗ್ಯಾಂಗ್

Posted By:
Subscribe to Filmibeat Kannada

ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಾಂಡ್ ಚಿತ್ರಕ್ಕೆ ಕಡೆಗೂ ಮುಹೂರ್ತ ನಿಗದಿಯಾಗಿದೆ. ಅಣ್ಣಾವ್ರ ಹುಟ್ಟುಹಬ್ಬ ಏಪ್ರಿಲ್ 24, 2011ರಂದು ಚಿತ್ರ ಸೆಟ್ಟೇರಲಿದೆ. ಬಸವಾರೆಡ್ಡಿ ಮತ್ತು ಕೆ ಎಂ ವೀರೇಶ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.

ಮಾರ್ಚ್ ಹೊತ್ತಿಗೆ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ' ಚಿತ್ರೀಕರಣ ಮುಗಿಯಲಿದೆ. ಜನವರಿ 16ಕ್ಕೆ ರಾಘವ ಲೋಕಿ ನಿರ್ದೇಶಿಸುತ್ತಿರುವ ಶಿವಣ್ಣ ಮುಖ್ಯಭೂಮಿಕೆಯಲ್ಲಿರುವ 'ಲಕ್ಷ್ಮಿ' ಚಿತ್ರ ಸೆಟ್ಟೇರಲಿದೆ. ಈ ಚಿತ್ರದ ಮೊದಲ ಹಂತ ಮುಗಿದ ಕೂಡಲೆ 'ಜೋಗಯ್ಯ' ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹಾರಲಿದ್ದಾನೆ.

ಇದೆಲ್ಲಾ ಮುಗಿಯುವ ವೇಳೆಗೆ ಹ್ಯಾಟ್ರಿಕ್ ಹೀರೋ ಅಭಿನಯಿಸಲಿರುವ 102ನೇ ಚಿತ್ರ 'ಆಪರೇಷನ್ ಗೋಲ್ಡನ್ ಗ್ಯಾಂಗ್‌'ಗೆ ಮುಹೂರ್ತ ಕೂಡಿಬಂದಿರುತ್ತದೆ. ಅಂದರೆ ಏಪ್ರಿಲ್ 24ರಂದು ಈ ಚಿತ್ರ ಭರ್ಜರಿಯಾಗಿ ಆರಂಭವಾಗಲಿದೆ. "ಈ ಚಿತ್ರವನ್ನು ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡುತ್ತಿರುವುದಾಗಿ" ಶಿವಣ್ಣ ಹೇಳಿದ್ದಾರೆ.

ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

ಬಾಂಡ್ ಚಿತ್ರಗಳಲ್ಲಿ ವರನಟ ರಾಜ್ ಕುಮಾರ್ ಅವರು ತಮ್ಮದೇ ಆದಂತಹ ಶೈಲಿಗೆ ಹೆಸರಾಗಿದ್ದರು. ಜೇಡರಬಲೆ, ಗೋವಾದಲ್ಲಿ ಸಿಐಡಿ 999, ಅಪರೇಷನ್ ಜಾಕ್ ಪಾಟ್, ಅಪರೇಷನ್ ಡೈಮಂಡ್ ರಾಕೆಟ್ ಬಾಂಡ್ ಶೈಲಿ ಚಿತ್ರಗಳನ್ನು ಹೆಸರಿಸಬಹುದು. ಧೂಮಕೇತು ಚಿತ್ರವನ್ನು ಬೇಕಾದರೆ ಈ ಪಟ್ಟಿಗೆ ಸೇರಿಸಬಹುದು.

ಹಾಲಿವುಡ್‌ನಲ್ಲಿ ಬಾಂಡ್ ಚಿತ್ರಗಳೆಂದರೆ ಪ್ರೇಕ್ಷಕರು ಈಗಲೂ ಮುಗಿಬಿದ್ದು ನೋಡುತ್ತಾರೆ. ಭಾರತೀಯ ಚಿತ್ರರಂಗದಲ್ಲೂ ಈ ರೀತಿಯ ಪ್ರಯೋಗಗಳು ಸಾಕಷ್ಟು ನಡೆದಿವೆ. ಇದೇ ಮೊದಲ ಬಾರಿಗೆ ಬಾಂಡ್ ಶೈಲಿಯ ಚಿತ್ರದಲ್ಲಿ ಅಭಿನಯಿಸುತ್ತಿರುವ ಶಿವಣ್ಣನನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಒಪ್ಪುತ್ತಾರೋ ಕಾದು ನೋಡಬೇಕು.

ಅಂದಹಾಗೆ 'ಆಪರೇಷನ್ ಗೋಲ್ಡನ್ ಗ್ಯಾಂಗ್' ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಇರುತ್ತದೆ. ಇನ್ನುಳಿದಂತೆ ತಾರಾಬಳಗ, ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಏಪ್ರಿಲ್ 24ರಂದೇ ಜೋಗಯ್ಯನನ್ನು ಬಿಡುಗಡೆ ಮಾಡಬೇಕೆಂದು ಪ್ರೇಮ್ ಸಂಕಲ್ಪ ಮಾಡಿದ್ದಾರೆ. [ಶಿವರಾಜ್ ಕುಮಾರ್]

English summary
Hatrick Hero Shivaraj Kumar bond movie Operation Golden Gang to be launched on April 24, 2011. This the 102nd movie for Shivarajkumar. Basava Reddy and KM Veeresh has jointly produced the movie. Gurukiran will score the music.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X