»   » ಟ್ವಿಟ್ಟರ್‌ನಲ್ಲಿ ಪಟಾಕಿ ಸಿಡಿಸಿದ ಗೋಲ್ಡನ್ ಗರ್ಲ್ ರಮ್ಯಾ

ಟ್ವಿಟ್ಟರ್‌ನಲ್ಲಿ ಪಟಾಕಿ ಸಿಡಿಸಿದ ಗೋಲ್ಡನ್ ಗರ್ಲ್ ರಮ್ಯಾ

Posted By:
Subscribe to Filmibeat Kannada

ಅಂತೂ ಇಂತೂ ಚಿಕ್ಕಮಗಳೂರು ಉಡುಪಿ ಲೋಕಸಭೆ ಉಪಚುನಾವಣೆಯಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಪೂಜೆ ಫಲಿಸಿದೆ. ಮನೆಮನೆಗೂ ಹೋಗಿ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗಡೆ ಪರ ಪ್ರಚಾರ ಮಾಡಿದ್ದು ಫಲ ನೀಡಿದೆ. ಈ ಬಗ್ಗೆ ರಮ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ರಮ್ಯಾ ಅವರ ಮಾತುಗಳಲ್ಲಿ ಜಯಪ್ರಕಾಶ್ ಅವರ ಗೆಲುವಿಗೆ ಪರೋಕ್ಷವಾಗಿ ತಾವೇ ಕಾರಣ ಎಂಬುದು ವ್ಯಕ್ತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿ. ಸುನಿಲ್ ಕುಮಾರ್ ಅವರನ್ನು ಸುಮಾರು 45,724 ಸಾವಿರ ಮತಗಳಿಂದ ಸೋಲಿಸಿರುವುದು ಗೊತ್ತೇ ಇದೆ.

ರಮ್ಯಾ ಅಭಿಮಾನಿಗಳಿಂದಲೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಜ್ಯ ರಾಜಕಾರಣದಲ್ಲಿ ರಮ್ಯಾ ಅವರ ಮ್ಯಾಜಿಕ್ ಮತ್ತೊಮ್ಮೆ ಕ್ಲಿಕ್ ಆಗಿರುವುದು ಮುಂದಿನ ಅವರ ರಾಜಕೀಯ ಹಾದಿಗೆ ರತ್ನಗಂಬಳಿ ಹಾಸಿದೆ. (ಒನ್‌ಇಂಡಿಯಾ ಕನ್ನಡ)

English summary
Kannada actress Ramya celebrates Congress has won the Udupi-Chikmagalur Lok Sabha seat in Karnataka in the bypoll. Congress party candidate K. Jayaprakash Hegde emerging victorious in the bypoll by a margin of 45,724 votes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada