Just In
Don't Miss!
- News
50 ಸಾವಿರ ಪಾಯಿಂಟ್ ದಾಟಿದ ಸೂಚ್ಯಂಕ, ಹೂಡಿಕೆದಾರರು ಸಂತಸ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Automobiles
ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು
- Finance
50 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್; ನಿಫ್ಟಿ 14700 ಪಾಯಿಂಟ್ ಆಚೆಗೆ
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡ ತಾರೆ ರಾಧಿಕಾ ನಿರ್ಮಾಣದಲ್ಲಿ ರಮ್ಯಾ ಚಿತ್ರ
ಕನ್ನಡ ಸಿನಿಮಾ ತಾರೆ ರಾಧಿಕಾ ಸದ್ದಿಲ್ಲದಂತೆ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ರಾಧಿಕಾ ನಿರ್ಮಿಸುತ್ತಿರುವ ಚಿತ್ರಕ್ಕೆ ನಾಯಕಿ ಯಾರು ಗೊತ್ತೆ? ಗೋಲ್ಡನ್ ಗರ್ಲ್ ರಮ್ಯಾ. ಹೌದು ಈ ವಿಷಯವನ್ನು ಸ್ವತಃ ರಮ್ಯಾ ಅವರೇ ಸ್ಪಷ್ಟಪಡಿಸಿದ್ದಾರೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ.
ಈ ಚಿತ್ರಕ್ಕೆ 'ಲಕ್ಕಿ' ಎಂದೂ ಹೆಸರಿಟ್ಟಿದ್ದಾರೆ. ಚಿತ್ರದ ನಾಯಕ ನಟ ಯಶ್. ಚಿತ್ರದಲ್ಲಿ ಸಿಕ್ಕಾಪಟ್ಟೆ ಗ್ರಾಫಿಕ್ಸ್ ಇರುತ್ತದಂತೆ. ಕತೆ ಪುಸ್ತಕ ಓದಿದಂತೆ ಚಿತ್ರಕತೆ ಸಾಗುತ್ತದೆ. ಸಿಕ್ಕಾಪಟ್ಟೆ ತಮಾಷೆ ಪ್ರಸಂಗಗಳಿರುವ ಈ ಚಿತ್ರ ರಾಧಿಕಾ ನಿರ್ಮಾಣದ ಚೊಚ್ಚಲ ಚಿತ್ರ ಎಂದಿದ್ದಾರೆ ರಮ್ಯಾ.
ಆಗಸ್ಟ್‌ನಲ್ಲಿ ಲಕ್ಕಿ ಚಿತ್ರ ಸೆಟ್ಟೇರಲಿದ್ದು, ನಾಯಿ ಹಾಗೂ ಅದಕ್ಕೆ 'ಲಕ್ಕಿ' ಎಂದು ಹೆಸರಿಟ್ಟ ಹುಡುಗ ಹಾಗೂ ಅವನ ಕನಸಿನ ಕನ್ಯೆ ಸುತ್ತ ಕತೆ ಸುತ್ತುತ್ತದೆ. ಈ ಚಿತ್ರಕ್ಕೆ ಇತ್ತೀಚೆಗಷ್ಟೆ ಸಹಿ ಹಾಕಿದ್ದಾಗಿ ರಮ್ಯಾ ಹೇಳಿದ್ದಾರೆ.
ನಟಿ ರಾಧಿಕಾ ತಾಯಿಯಾದ ಬಳಿಕ ಚಿತ್ರರಂಗದಿಂದ ಕೊಂಚ ದೂರ ಸರಿದಿದ್ದರು. ಈಗ ಮತ್ತೆ ಅವರ ಆಗಮನ ಗಾಂಧಿನಗರದಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)