»   » ಅಂಬರೀಶ್ ಪುತ್ರ ಅಭಿಷೇಕ್ ಗೌಡ ಸ್ಟೈಲೇ ಬೇರೆ!

ಅಂಬರೀಶ್ ಪುತ್ರ ಅಭಿಷೇಕ್ ಗೌಡ ಸ್ಟೈಲೇ ಬೇರೆ!

Posted By:
Subscribe to Filmibeat Kannada

ಜನಪ್ರಿಯ ನಾಯಕ ನಟ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಗೌಡ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂಬಷ್ಟು ಬದಲಾಗಿದ್ದಾರೆ. ಅಭಿಷೇಕ್ ಗೌಡರನ್ನು ನೋಡಿದರೆ ಯುವ ಅಂಬರೀಶ್ ನೆನಪಾಗುತ್ತಾರೆ. ಅಂಬರೀಶ್ ಅವರ ಥೇಟ್ ಜೆರಾಕ್ಸ್ ಕಾಪಿಯಂತೆ ಅಭಿಷೇಕ್ ಬೆಳೆದು ನಿಂತಿದ್ದಾರೆ.

ಮೊನ್ನೆ ನಡೆದ 'ನೂರು ಜನ್ಮಕು' ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಅಪ್ಪನೊಂದಿಗೆ ಅಭಿಷೇಕ್ ಬಂದಿದ್ದರು. ಅರೆರೆ ಎಷ್ಟು ದೊಡ್ಡವನಾಗಿಬಿಟ್ಟಿದ್ದ್ದೀಯೋ! ಮುವ್ವತ್ತೈದು ವರ್ಷಗಳ ಹಿಂದೆ ನಿಮ್ಮಪ್ಪನನ್ನು ನೋಡಿದಷ್ಟೆ ಖುಷಿಯಾಗುತ್ತಿದೆ ಎಂದು ಸಮಾರಂಭದಲ್ಲಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು.

'ವೀರಪರಂಪರೆ' ಚಿತ್ರಕ್ಕಾಗಿ ಅಂಬರೀಶ್ ಬೆಳ್ಳಗಾದ ಮೀಸೆಯನ್ನು ಉದ್ದಕ್ಕೆ ಬೆಳೆಸಿದ್ದಾರೆ. ಅಭಿಷೇಕ್ ಸಹ ತಮ್ಮ ಚಿಗುರು ಮೀಸೆಯನ್ನು ಅಪ್ಪನ ಸ್ಟೈಲಲ್ಲೇ ಬೆಳೆಸಿದ್ದರು. ಗಡ್ಡ ಕೂದಲಿಗೆ ಮೀಸೆಯನ್ನು ಪೋಣಿಸಿ ಕಲಾತ್ಮಕ ಸ್ಪರ್ಶ ನೀಡಲಾಗಿತ್ತು. ಸ್ಟೈಲ್ ನಲ್ಲಿ ಅಪ್ಪನಿಗಿಂತಲೂ ತಾನೇನು ಕಮ್ಮಿ ಇಲ್ಲ ಎಂಬಂತಿದ್ದರು ಅಭಿಷೇಕ್. ಕಾರ್ಯಕ್ರಮಕ್ಕೆ ಸುಮಲತಾ ಅಂಬರೀಶ್ ಸಹ ಆಗಮಿಸಿದ್ದರು.

ಮಂಡ್ಯದ ಗಂಡಿನ ಸ್ಟೈಲ್ ನಲ್ಲಿ ಚಿಗುರು ಮೀಸೆ ಹುಡುಗ ಅಭಿಷೇಕ್ ಗೌಡ ಕಾಣಿಸಿದ್ದು ಹಲವರ ಗಮನ ಸೆಳೆಯಿತು. ಇಷ್ಟಕ್ಕೂ ಬೆಳ್ಳಿತೆರೆಗೆ ಅಭಿಷೇಕ್ ಯಾವಾಗ ಬರುತ್ತಾರೆ ಎಂಬ ಪ್ರಶ್ನೆ ನಮ್ಮ ನಿಮ್ಮಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಲವರನ್ನು ಕಾಡುತ್ತಿತ್ತು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada