»   » ಪಾಕ್ ಜನ ಕಲ್ಯಾಣ ರಾಯಭಾರಿ ಸಾನಿಯಾ ಮಿರ್ಜಾ

ಪಾಕ್ ಜನ ಕಲ್ಯಾಣ ರಾಯಭಾರಿ ಸಾನಿಯಾ ಮಿರ್ಜಾ

Posted By:
Subscribe to Filmibeat Kannada

ಭಾರತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಆಕೆಯ ಪತಿ ಶೋಯಬ್ ಮಲಿಕ್ ಅವರನ್ನು ಪಾಕ್ ನ ಜನ ಕಲ್ಯಾಣ ಸಚಿವಾಲಯದ ಅಧಿಕೃತ ರಾಯಭಾರಿಗಳನ್ನಾಗಿ ನೇಮಕ ಮಾಡಲು ಪಾಕಿಸ್ತಾನ ಚಿಂತನೆ ನಡೆಸಿದೆ. ಈ ವಿಷಯವನ್ನು ಪಾಕಿಸ್ತಾನದ ಜನ ಕಲ್ಯಾಣ ಸಚಿವೆ ಫಿರ್ದೋಸ್ ಆಶಿಕ್ ಅಮನ್ ತಿಳಿಸಿದ್ದಾರೆ.

ಈಗಷ್ಟೆ ವಿವಾಹವಾಗಿರುವ ಈ ಜೋಡಿ ಪಾಕಿಸ್ತಾನಕ್ಕೆ ಆಗಮಿಸಿದ ಕೂಡಲೆ ರಾಯಭಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಾಯಿಯಾ ಹಾಗೂ ಶೋಯಬ್ ಪಾಕಿಸ್ತಾನದಲ್ಲಿ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ಸಂಬಂಧ ಪ್ರಚಾರ ನಡೆಸಲಿದ್ದಾರೆ ಎಂದು ಎಂದು ಫಿರ್ದೋಸ್ ತಿಳಿಸಿದ್ದಾರೆ.

ಸದ್ಯಕ್ಕೆ ಫಿರ್ದೋಸ್ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಅಸೋಚಾಮ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಇವರಿಬ್ಬರ ವಿವಾಹದಿಂದ ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ ಎಂದು ಫಿರ್ದೋಸ್ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದ ಪರ ಸಾನಿಯಾ ಟೆನ್ನಿಸ್ ಆಡಲಿದ್ದಾರೆಯೇ? ಎಂಬ ಪ್ರಶ್ನೆಗೆ ''ಆಡುವುದು, ಬಿಡುವುದು ಸಾನಿಯಾಗೆ ಬಿಟ್ಟದ್ದು'' ಎಂದು ಸಚಿವೆ ಉತ್ತರಿಸಿದ್ದಾರೆ.ಹಾಗೆಯೇ ಸಾನಿಯಾ ಮತ್ತು ಮಲಿಕ್ ತಮ್ಮ ವೈವಾಹಿಕ ಜೀವನವನ್ನು ದುಬೈನಲ್ಲಿ ಕಳೆಯುವುದು ಬಹುತೇಕ ಖಚಿತವಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada