»   » ಯಶವಂತಪುರ ಮಾರುಕಟ್ಟೆಯಲ್ಲಿ ಮಾಲಾಶ್ರೀ ಶಕ್ತಿ ಫೈಟ್ಸ್

ಯಶವಂತಪುರ ಮಾರುಕಟ್ಟೆಯಲ್ಲಿ ಮಾಲಾಶ್ರೀ ಶಕ್ತಿ ಫೈಟ್ಸ್

Posted By:
Subscribe to Filmibeat Kannada

ಐದು ಲಕ್ಷ ಹಣ ಕೊಡಬೇಕಾಗಿರುವ ಹುಡುಗನಿಗೆ ಚಿತ್ರದ ಖಳನಾಯಕ ಮನ ಬಂದಂತೆ ಹೊಡೆಯುತ್ತಿರುತ್ತಾನೆ. ಆ ಸಮಯಕ್ಕೆ ಅಲ್ಲಿಗೆ ಆಗಮಿಸಿದ ನಾಯಕಿ ಖಳನಾಯಕನ ಕುರಿತು ಆ ಹುಡುಗನಿಗೆ ಹೊಡೆಯಬೇಡವೆಂದು ಹೇಳುತ್ತಾಳೆ. ಮಾತು ಕೇಳದ ಖಳನಾಯಕನಿಗೆ ಹಾಗೂ ಚಿತ್ರದ ನಾಯಕಿಗೂ ಹೊಡೆದಾಟವಾಗುತ್ತದೆ.

ಈ ಸನ್ನಿವೇಶವನ್ನು ನಗರದ ಯಶವಂತಪುರ ಮಾರುಕಟ್ಟೆಯಲ್ಲಿ ರಾಮು ಎಂಟರ್ ಪ್ರೈಸಸ್‌ನ ಮೂವತ್ತೆರಡನೇ ಕಾಣಿಕೆ 'ಶಕ್ತಿ' ಚಿತ್ರಕ್ಕಾಗಿ ನಿರ್ದೇಶಕ ಅನಿಲ್ ಚಿತ್ರಿಸಿಕೊಂಡರು. ಮಾಲಾಶ್ರೀ, ಶಯಾಜಿರಾವ್ ಶಿಂಧೆ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಸಂಭಾಷಣೆಗಾರರಾಗಿದ್ದ ಅನಿಲ್ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆಯುವುದರೊಂದಿಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇದು ಇವರಿಗೆ ಚೊಚ್ಚಲ ಚಿತ್ರ. ಮಾಲಾಶ್ರೀ ಅವರು ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರವಿದು.

ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್, ಶಯಾಜಿರಾವ್ ಶಿಂಧೆ, ವಿನಯಾಪ್ರಸಾದ್, ಆಶಾಲತಾ, ಅವಿನಾಶ್, ಶರತ್ ಲೋಹಿತಾಶ್ವಾ, ಸಾಧುಕೋಕಿಲಾ, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ. ಥ್ರಿಲ್ಲರ್‌ಮಂಜು, ರವಿವರ್ಮ, ರಾಮ್‌ಲಕ್ಷ್ಮಣ್ ಮತ್ತು ಪಳನಿರಾಜ್ ಸಾಹಸ ನಿರ್ದೇಶನ, ಸುಧಾಕರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Kannada actress Malashri's upcoming film Shakti is currently being shot in Bangalore. Recently the fight sequence had shot at Yeshwanthpur market area. The movie is directed by Anil, the film is being produced by Ramu on Ramu Enterprises banner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada