»   » ಕನ್ನಡ ನಟಿಗೆ ವಂಚಿಸಿದ್ದವ ಈಗ ಪೊಲೀಸ್ ಅತಿಥಿ

ಕನ್ನಡ ನಟಿಗೆ ವಂಚಿಸಿದ್ದವ ಈಗ ಪೊಲೀಸ್ ಅತಿಥಿ

Posted By:
Subscribe to Filmibeat Kannada

ಕನ್ನಡದ 'ಶ್ರೀಮೋಕ್ಷ' ಚಿತ್ರದಲ್ಲಿ ನಟಿಸಿದ್ದ ರಿತು ಸಚ್ ದೇವ ಅವರಿಂದ ಲಕ್ಷಾಂತರ ಹಣ ಪೀಕಿ ವಂಚಿಸಿದ್ದ ಆರೋಪ ಎದುರಿಸುತ್ತಿದ್ದಏಜೆಂಟ್ ಫ್ಲಿನ್ ರೆಮೆಡಿಯೋಸ್‌ನನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ರಿತು ಸಚ್ ದೇವ ಅವರಿಗೆ ಜನಪ್ರಿಯ ರಿಯಾಲಿಟಿ ಷೋ 'ಬಿಗ್ ಬಾಸ್‌'ಗೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ಹಣ ಲಪಟಾಯಿಸಿದ್ದ ಆರೋಪ ಫ್ಲಿನ್ ರೆಮೆಡಿಯೋಸ್ ಎದುರಿಸುತ್ತಿದ್ದ.

ಬಂಧನಕ್ಕೊಳಗಾಗಿರುವ ಫ್ಲಿನ್ ರೆಮೆಡಿಯಸ್‌ನನ್ನು ಬುಧವಾರದ(ನ.24) ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ವರ್ಸೋವಾ ಪೊಲೀಸ್ ಠಾಣೆಯ ಸೀನಿಯರ್ ಇನ್ಸೆಪೆಕ್ಟರ್ ಸುರೇಶ್ ನಲವಾಡೆ ತಿಳಿಸಿದ್ದಾರೆ. "ಟಿವಿ ಶೋಗಳಲ್ಲಿ ಛಾನ್ಸ್ ಕೊಡಿಸುವುದಾಗಿ ನಂಬಿಸಿ ತಮ್ಮಿಂದ ರು.5 ಲಕ್ಷ ಹಣ ತೆಗೆದುಕೊಂಡಿದ್ದ" ಎಂದು ರಿತು ಸಚ್ ದೇವ ನವೆಂಬರ್ 12ರಂದು ಪೊಲೀಸರಿಗೆ ದೂರು ನೀಡಿದ್ದರು.

ಜನಪ್ರಿಯ ರಿಯಾಲಿಟಿ ಷೋ 'ಬಿಗ್ ಬಾಸ್‌'ಗೆ ಪ್ರವೇಶ ನೀಡುವುದಾಗಿ ಹೇಳಿದ್ದ ಫ್ಲಿನ್ ನಡುನೀರಿನಲ್ಲಿ ಕೈಬಿಟ್ಟಿದ್ದ. ಆತನ ಜೋಳಿಗೆ ಲಕ್ಷಾಂತರ ದುಡ್ಡು ಸುರಿದಿದ್ದೀನಿ. ಆತ ಹೇಳಿದ ರೀತಿ ತಯಾರಿ ನಡೆಸಿದ್ದೀನಿ ಆದರೂ, ಆತ ನನ್ನನ್ನು ಕಡೆಗಣಿಸಿದ್ದಲ್ಲದೆ, ಬಿಗ್ ಬಾಸ್ ಪ್ರವೇಶದ ಅವಕಾಶ ವಂಚಿಸಿದ್ದಾನೆ. ಕೆಟ್ಟ ಭಾಷೆಯಲ್ಲಿ ಸಂದೇಶಗಳನ್ನು ಕಳಿಸಿದ್ದಲ್ಲದೆ, ಕಿರುಕುಳ ನೀಡಿದ್ದಾನೆ ಎಂದು ಮಾಧ್ಯಮಗಳ ಮುಂದೆ ರಿತು ಅಲವತ್ತು ಕೊಂಡಿದ್ದರು.

"ಮ್ಯೂಸಿಕ್ ಅಲ್ಬಂ, ಬಿಗ್ ಬಾಸ್ ಪ್ರವೇಶ ಸೇರಿದಂತೆ ಹಲವು ಪೋಗ್ರಾಂಗಳಿಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ದ್ರೋಹ ಬಗೆದಿದ್ದಾನೆ. ಆರ್ಥಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಎಂದು ರಾತ್ರಿ ಹೊತ್ತು ಮೆಸೇಜ್ ಕಳಿಸುತ್ತಾನೆ. ಅವನ ನಡವಳಿಕೆ ಭಯ ಹುಟ್ಟಿಸಿದೆ" ಎಂದು ಮುಂಬೈನ ವರ್ಸೊವಾ ಪೊಲೀಸ್ ಠಾಣೆಯಲ್ಲಿ ರಿತು ದೂರು ದಾಖಲಿಸಿದ್ದರು.

English summary
An agent of a Kannada actress(Ritu Sachdeva) was arrested after she alleged that he had cheated and molested her, police said on Sunday. The accused Flynn Remedios, who also claims to be a producer, was nabbed on Friday and remanded in police custody till Wednesday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada