»   » ನಾರಿಯ ಸೀರೆ ಕದ್ದ ಕ್ರೇಜಿಸ್ಟಾರ್ ರವಿಚಂದ್ರನ್

ನಾರಿಯ ಸೀರೆ ಕದ್ದ ಕ್ರೇಜಿಸ್ಟಾರ್ ರವಿಚಂದ್ರನ್

Posted By:
Subscribe to Filmibeat Kannada

ಇತ್ತೀಚೆಗಷ್ಟೆ 'ಹೂ' ಚಿತ್ರದ ಮೂಲಕ ಪ್ರೇಕ್ಷಕರ ಹೃದಯ ಕದ್ದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಏಕಾಏಕಿ ನಾರಿಯ ಸೀರೆ ಕದ್ದಿದ್ದಾರೆ! ಹೌದು ಅಚ್ಚರಿ ಪಡುವಂತಹದ್ದೇನು ಇಲ್ಲ. ರವಿಚಂದ್ರನ್ ಹೊಸ ಚಿತ್ರದ ಹೆಸರು 'ನಾರಿಯ ಸೀರೆ ಕದ್ದ'. ಜುಲೈ 9ರಂದು ರವಿಯ ಹೊಸ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ.

ಈ ಬಾರಿ ರವಿಚಂದ್ರನ್ ತಮ್ಮ ಹೊಸ ಚಿತ್ರದ ಬಗೆಗಿನ ವಿವರಗಳನ್ನು ಸಾಕಷ್ಟು ಗುಟ್ಟಾಗಿಟ್ಟಿದ್ದರು. ಆದರೂ ನಾರಿಯ ಸೀರೆ ಕದ್ದು ಮಾಧ್ಯಮಗಳಿಗೆ ಸಿಕ್ಕಿಬಿದ್ದಿದ್ದಾರೆ. 'ಹೂ' ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ರವಿಯ ಸಾಲು ಸಾಲು ಚಿತ್ರಗಳು ಸೆಟ್ಟೇರುವ ಸಿದ್ಧತೆಯಲ್ಲಿವೆ. ಅವುಗಳಲ್ಲಿ 'ನಾರಿಯ ಸೀರೆ ಕದ್ದ' ಸಹ ಒಂದು.

ಚಿತ್ರಕ್ಕೆ ಉದಯ ಪ್ರಕಾಶ್ ಆಕ್ಷನ್, ಕಟ್ ಹೇಳಲಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಕೆ ಮಂಜು ನಿರ್ಮಾಪಕರು. ಚಿತ್ರದಲ್ಲಿ ರವಿಯ ಜೊತೆಗೆ ರಮೇಶ್ ಅರವಿಂದ್ ಹಾಗೂ ದಿಗಂತ್ ನಾಯಕರು. ನಾಯಕಿಯ ಆಯ್ಕೆ ಸಹ ಅಂತಿಮವಾಗಿದ್ದು ಹರಿಪ್ರಿಯಾ, ರಾಗಿಣಿ ಮತ್ತು ಸುಮನ್ ರಂಗನಾಥ್ ಕಣಕ್ಕಿಳಿಯಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada