»   » ಸೌತ್ ಸ್ಕೋಪ್ ಮುಖಪುಟ ಅಲಂಕರಿಸಿದ ಪುನೀತ್

ಸೌತ್ ಸ್ಕೋಪ್ ಮುಖಪುಟ ಅಲಂಕರಿಸಿದ ಪುನೀತ್

Posted By:
Subscribe to Filmibeat Kannada

ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಿಯತಕಾಲಿಕೆ 'ಸೌತ್ ಸ್ಕೋಪ್' ಜೂನ್ ಸಂಚಿಕೆ ಮುಖಪುಟವನ್ನು ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಲಂಕರಿಸಿದ್ದಾರೆ. ಸೌತ್ ಸ್ಕೋಪ್ ಮುಖಪುಟದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಪುನೀತ್ ಪಾತ್ರರಾಗಿದ್ದಾರೆ.

ಈ ನಿಯತಕಾಲಿಕೆಯ ವಿಶೇಷವೆಂದರೆ ಹೆಚ್ಚಾಗಿ ದಕ್ಷಿಣ ಭಾರತದ ಸಿನಿಮಾ ಸುದ್ದಿಗಳನ್ನು ಪ್ರಕಟಿಸುವುದು. ಕನ್ನಡ ನಟ/ನಟಿಯರಿಗೆ ಈ ನಿಯತಕಾಲಿಕೆಯಲ್ಲಿ ಇದುವರೆಗೂ ಜಾಗ ಸಿಕ್ಕಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ಪುನೀತ್ ಬಗ್ಗೆ ಬರೆಯುವ ಮೂಲಕ ಕನ್ನಡಕ್ಕೂ ಸ್ಥಾನ ಕೊಟ್ಟಂತಾಗಿದೆ.

ಛಾಯಾಗ್ರಾಹಕ ಮಹೇಂದ್ರ ಸಿಂಹ ನಿಯತಕಾಲಿಕೆಗಾಗಿ ಪುನೀತ್ ರನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮೈಲಾರಿ ಚಿತ್ರಕ್ಕಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕೂಲ್ ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶರನ್ನು ತಮ್ಮ ವಿಶಿಷ್ಟ ಶೈಲಿಯಿಂದ ಸೆರೆಹಿಡಿದ ಖ್ಯಾತಿ ಇವರದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada