»   » ವರ್ಷದ ಕೊನೆಯ ಚಿತ್ರವಾಗಿ 'ಶಿಶಿರ'

ವರ್ಷದ ಕೊನೆಯ ಚಿತ್ರವಾಗಿ 'ಶಿಶಿರ'

Subscribe to Filmibeat Kannada

ಕನ್ನಡ ಚಿತ್ರರಂಗಕ್ಕೊಂದು ವಿಭಿನ್ನ ಚಿತ್ರ ಕೊಡಬೇಕೆಂಬ ಉದ್ದೇಶದಿಂದ ಉತ್ಸಾಹಿ ಯುವಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ 'ಶಿಶಿರ'. ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಪೂರ್ಣಚಂದ್ರ ಅಥವಾ 6ನೇ ಋತು ಎಂದು ಅರ್ಥ ಕೊಡುವ ಈ ಶೀರ್ಷಿಕೆಯೇ ಆಕರ್ಷಕವಾಗಿದೆ. ಇದಕ್ಕೆ ಹಾರರ್ ಟಚ್ ಕೂಡ ಇದೆ.

ಮಹಾಶೈಲ ಸಿನಿಸಂಕುಲ ಮತ್ತು ಸಿ.ಎಂ.ಬಿ. ವೆಂಚರ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ 47 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ನಾಯಕ, ನಾಯಕಿ ಸೇರಿ ಇಡೀ ಚಿತ್ರದಲ್ಲಿ ಕೇವಲ 9 ಪಾತ್ರಗಳಿರುತ್ತವೆ. ನಟಿ ಪ್ರೇಮಾ ಬಹಳ ದಿನಗಳ ನಂತರ ಈ ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ಯಶಸ್, ಮೇಘನಾ ಜೊತೆ ಎರಡು ಪುಟಾಣಿಗಳು ಹಾಗೂ 7.5 ಅಡಿ ಎತ್ತರದ ಸಂತೋಷ್ ಅಭಿನಯಿಸಿರುವುದು, ಒಂದೇ ಷಾಟ್‌ನಲ್ಲಿ ಹಾಡೊಂದನ್ನು ಚಿತ್ರೀಕರಿಸಿದ್ದಾರೆ.

ಹೀಗೆ ಹಲವಾರು ವಿಶೇಷತೆಗಳನ್ನೊಳಗೊಂಡ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್‌ರ ಸಂಗೀತ ಸಂಯೋಜನೆಯ ಐದು ಹಾಡುಗಳಿದ್ದು, ಪ್ರತಿಹಾಡಿಗೂ ಅದರದೇ ಆದ ವಿಶೇಷತೆ ಇದೆ. ಸುರೇಶ್ ಬಾಬು ಅವರು ಬಹಳ ಜಾಗರೂಕತೆಯಿಂದ ಛಾಯಾಗ್ರಹಣ ಕೆಲಸ ನಿರ್ವಹಿಸಿದ್ದಾರೆ. ಹೀಗೆ ಪ್ರತಿ ಹಂತದಲ್ಲೂ ವಿಶೇಷಗಳೇ ತುಂಬಿರುವ ಈ ಚಿತ್ರವನ್ನು ಬಿ. ಮಹಾದೇವ್ ಹಾಗೂ ಬಿ.ಟಿ. ಮಂಜು ತುಂಬಾ ಆಸಕ್ತಿಯಿಂದ ನಿರ್ಮಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada