For Quick Alerts
  ALLOW NOTIFICATIONS  
  For Daily Alerts

  ವೇಶ್ಯಾವೃತ್ತಿ ಜಾಲದಲ್ಲಿ ಸಿಕ್ಕಿಬಿದ್ದ ಸಿನಿಮಾ ತಾರೆಯರು

  By Rajendra
  |

  ವೇಶ್ಯಾವೃತ್ತಿಯಲ್ಲಿ ನಿರತರಾಗಿದ್ದ ತೆಲುಗು ಚಿತ್ರನಟಿ ಸಾಯಿರಾ ಬಾನು(ಗ್ಯಾಲರಿ) ಮತ್ತು ಜ್ಯೋತಿ(ಗ್ಯಾಲರಿ) ಸೇರಿದಂತೆ ಒಟ್ಟು ಏಳು ಮಂದಿ ಹೈದರಾಬಾದ್ ಪೊಲೀಸರಿಗೆಸೋಮವಾರ ಸ್ಥಳದಲ್ಲೆ ಸಿಕ್ಕಿಬಿದ್ದಿದ್ದಾರೆ. ಸಾಯಿರಾ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದು ಜ್ಯೋತಿ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದರು.

  ಖಚಿತ ಸುಳಿವಿನ ಮೇರೆಗೆ ಪೊಲೀಸರು ದಾಳಿ ಮಾಡಿದಾಗ ಇವರೆಲ್ಲಾ ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡಿದ್ದು ಬಯಲಾಗಿದೆ. ಇವರೊಂದಿಗೆ ಉಜ್ಬೆಕಿಸ್ತಾನದಒಬ್ಬ ಮಹಿಳೆ ಹಾಗೂ ಗ್ರಾಹಕರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲಾ ಕುಂದನ್ ಬಾಗ್ ನ ಅಪಾರ್ಟ್ ಮೆಂಟ್ ನಲ್ಲಿ ಈ ದಂಧೆ ನಡೆಸುತ್ತಿದ್ದರು.

  ಚಿತ್ರ ನಟಿಯರ ಜೊತೆಗೆ ಬಂಧಿತರಾಗಿರುವ ಉಳಿದವರ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಜಾಲದಲ್ಲಿ ಹಲವು ಶ್ರೀಮಂತ ಮಹಿಳೆಯರು, ಹೆಸರಾಂತ ನಟಿಯರು ಇರುವುದಾಗಿ ಶಂಕೆ ವ್ಯಕ್ತವಾಗಿದೆ. ಹೈದರಾಬಾದ್ ನ ಕುಂದನ್ ಬಾಗ್ ಪ್ರದೇಶ ತುಂಬ ಆಯಕಟ್ಟಿನ ಸ್ಥಳವಾಗಿದ್ದು ಇಲ್ಲಿ ಮಂತ್ರಿ ಮಹೋದಯರು ಸೇರಿದಂತೆ ಶ್ರೀಮಂತರ ನಿವಾಸಗಳಿವೆ. ಭದ್ರತೆಯಲ್ಲಿ ಕಟ್ಟುನಿಟ್ಟಿನ ಪ್ರದೇಶ.

  ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಾರ್ಯಪಡೆ ಕುಂದನ್ ಬಾಗ್ ನ ಅಪಾರ್ಟ್ ಮೆಂಟ್ ಮೇಲೆ ದಿಢೀರ್ ದಾಳಿ ನಡೆಸಿತು. ವಿವಿಐಪಿಗಳ ನಿವಾಸಗಳುಳ್ಳ ಈ ಪ್ರದೇಶದಲ್ಲಿ ವೇಶ್ಯವಾಟಿಕೆ ಜಾಲ ಬಯಲಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ತೆಲುಗು ಚಿತ್ರನಟಿಯರು ವೇಶ್ಯಾಜಾಲದಲ್ಲಿ ಸಿಕ್ಕಿಬೀಳುತ್ತಿರುವುದು ಇದೇ ಮೊದಲಲ್ಲ.

  2009ರಲ್ಲಿ ಸೀಮಾ ಎಂಬ ನಟಿ ವೇಶ್ಯಾ ಜಾಲದಲ್ಲಿ ಸಿಕ್ಕಿಬಿದ್ದದ್ದರು. ನೆನ್ನೆ ಮೊನ್ನೆಯಷ್ಟೆ ತೆಲುಗು ಚಿತ್ರರಂಗದ ಹೆಸರಾಂತ ನಟರ ಸಹೋದರ ಮಾದಕ ದ್ರವ್ಯ ಸಾಗಣೆ ಜಾಲದಲ್ಲಿ ಸಿಕ್ಕಿಬಿದ್ದಿದ್ದ. ಈ ಘಟನೆಯಿಂದ ಇಡೀ ತೆಲುಗು ಚಿತ್ರರಂಗ ದಂಗಾಗಿದೆ. ಈಗ ವೇಶ್ಯಾಜಾಲದ ಕರಿನೆರಳು ಬಿದ್ದು ಮತ್ತಷ್ಟು ಬೆಚ್ಚಿಬಿದ್ದಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X