»   » ಬಾಬಾಬುಡನ್‌ಗಿರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ವಿರಾಟ್

ಬಾಬಾಬುಡನ್‌ಗಿರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ವಿರಾಟ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ವಿರಾಟ್' ಚಿತ್ರೀಕರಣ ಫೆ.22ರಿಂದ ಚಾಲನೆ ಪಡೆದುಕೊಳ್ಳಲಿದೆ. ಎಚ್ ವಾಸು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಕುಮಾರ್ ಸಹೋದರರು ನಿರ್ಮಿಸುತ್ತಿದ್ದಾರೆ. ಈಗಾಗಲೆ ಒಂದನೇ ಹಂತದ ಚಿತ್ರೀಕರಣ ಮುಗಿದಿದೆ. ಈಗ ಆರಂಭವಾಗಿರುವುದು ಎರಡನೇ ಹಂತದ ಚಿತ್ರೀಕರಣ.

ಕೆ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇಷಾ ಚಾವ್ಲಾ ಹಾಗೂ ವಿಧಿಶಾ ಶ್ರೀವತ್ಸವ್ ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಬೆಂಗಳೂರಿನ ರೂಪದರ್ಶಿ ಚೈತ್ರಾ ಚಿತ್ರದಲ್ಲಿ ಮತ್ತೊಂದು ಗಮನಾರ್ಹ ಪಾತ್ರವನ್ನು ಪೋಷಿಸುತ್ತಿದ್ದಾರೆ. ಇವರ ಜೊತೆಗೆ ಹಿರಿಯ ತಾರಾಮಣಿಗಳ ಬಳಗವೇ ಚಿತ್ರದಲ್ಲಿದೆ. ಸುಹಾಸಿನಿ ಮಣಿರತ್ನಂ, ಸುಮಲತಾ ಅಂಬರೀಷ್ ಕೂಡ ಇದ್ದಾರೆ.

ಸುಹಾಸಿನಿ ಅವರದು ಮುಖ್ಯಮಂತ್ರಿ ಪಾತ್ರ. ಎರಡನೇ ಹಂತದ ಚಿತ್ರೀಕರಣ ಬಾಬಾಬುಡನ್‌ಗಿರಿಯಲ್ಲಿ ನಡೆಯಲಿದೆ. ಒಟ್ಟು ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಇದಕ್ಕಾಗಿ ಅತಿದೊಡ್ಡ ಗಾಜಿನಮನೆಯನ್ನೂ ನಿರ್ಮಿಸಲಾಗಿದ್ದು, ಚಿತ್ರೀಕರಣದ ಕೊನೆಯಲ್ಲಿ ಅದನ್ನು ಸ್ಫೋಟಿಸಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. (ಏಜೆನ್ಸೀಸ್)

English summary
Challenging Star Darshan starrer Viraat film completed its first schedule shoot and began its second schedule shoot. H Vasu is the director of this movie. The second schedule shooting will be held in Bababudangiri.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X