For Quick Alerts
  ALLOW NOTIFICATIONS  
  For Daily Alerts

  ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲೊಂದು ಅಣ್ಣಾವ್ರಗುಡಿ

  By *ಉದಯರವಿ
  |
  <ul id="pagination-digg"><li class="next"><a href="/news/23-mata-guruprasada-still-searching-dr-raj-photo-aid0052.html">Next »</a></li></ul>

  ಅಣ್ಣಾವ್ರ ಗಂಧದಗುಡಿ ಚಿತ್ರ ನೋಡಿರುತ್ತೀರಿ. ಆದರೆ ಅಣ್ಣಾವ್ರ ಗುಡಿ ಎಂದಾದರೂ ನೋಡಿದ್ದೀರಾ? ಬೆಂಗಳೂರು ಬಿವಿಕೆ ಅಯ್ಯಂಗಾರ್ ರಸ್ತೆಗೆ ಒಮ್ಮೆ ಬಂದರೆ ಅಭಿನಯ ಚಿತ್ರಮಂದಿರದ ಎದುರುಗಡೆ ಕಣ್ಣಾಯಿಸಿ ನೋಡಿ. ಶ್ರೀ ಲಕ್ಷ್ಮಿ ವೆಂಕಟೇಶ್ವರ ಫ್ರೇಮ್ ವರ್ಕ್ಸ್ ಎಂಬ ಬೋರ್ಡ್ ಕಾಣುತ್ತದೆ. ಆದರಲ್ಲಿ ಲಕ್ಷ್ಮಿ ಮತ್ತು ವೆಂಕಟೇಶ್ವರ ಫೋಟೋಗಳು ಅಷ್ಟಾಗಿ ಕಾಣ ಸಿಗುವುದಿಲ್ಲ. ಆದರೆ ಅಣ್ಣಾವ್ರ ಅಪರೂಪದಲ್ಲಿ ಅಪರೂಪ ಎಂಬಂತಹ ಫೋಟೋಗಳು ನಿಮ್ಮ ಕಣ್ಮನ ಸೆಳೆಯುತ್ತವೆ.

  ಕಳೆದ ಏಳೆಂಟು ವರ್ಷಗಳಿಂದ ನಾಡಿನಾದ್ಯಂತ ಸಂಚರಿಸಿ ಅಣ್ಣಾವ್ರ ಅಪರೂಪ ಫೋಟೋಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿರುವವರು ಸುರೇಶ್ ಬಾಬು. ಈ ಫೋಟೋಗಳ ಸಂಗ್ರಹಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸ್ಟುಡಿಯೋಗಳಿಂದ ಹಿಡಿದು ಶಿವಾಜಿನಗರದ ಗುಜರಿ ಅಂಗಡಿಗಳ ತನಕ ಚಪ್ಪಲಿ ಸವೆಸಿದ್ದಾರೆ.


  ಕೆಲವೊಮ್ಮೆ ಅಣ್ಣಾವ್ರ ಅಭಿಮಾನಿ ದೇವರುಗಳೇ ತಮ್ಮ ಬಳಿ ಇರುವ ಅಪರೂಪದ ಫೋಟೋಗಳನ್ನು ತಂದುಕೊಟ್ಟಿದ್ದುಂಟು. ಹಾಗೆ ಅಭಿಮಾನಿಗಳು ತಂದುಕೊಟ್ಟಂತಹ ಫೋಟೋಗಳ ಸಂಗ್ರಹವೇ ಹತ್ತಿರ ಹತ್ತಿರ ಸಾವಿರ ಸಂಖ್ಯೆಯಲ್ಲಿವೆ. ರಾಜ್ ಆರ್ಟ್ಸ್ ನವರೂ ಸಾಕಷ್ಟು ಫೋಟೋಗಳನ್ನು ಇವರಿಗೆ ಕೊಡುಗೆಯಾಗಿ ನೀಡಿದ್ದಾರೆ.

  ಅಣ್ಣಾವ್ರು ಆಟೋ ಚಾಲೂ ಮಾಡುತ್ತಿರುವ ಫೋಟೋ ಬೇಕಾ? ಯೋಗಾಸನ ಫೋಟೋ, ರಜನಿಕಾಂತ್, ಎಂಜಿ ರಾಮಚಂದ್ರನ್, ಧರ್ಮೇಂದ್ರ ಜೊತೆಗಿನ ಫೋಟೋ, ಅಣ್ಣಾವ್ರ ನವರಸಭರಿತ ಫೋಟೋಗಳನ್ನು ನೋಡಬೇಕೆ? ಕಸ್ತೂರಿ ನಿವಾಸ, ಎರಡು ಕನಸು, ಲಗ್ನಪತ್ರಿಕೆ, ಪ್ರೇಮದ ಕಾಣಿಕೆ, ಪ್ರತಿಧ್ವನಿ...ಹೀಗೆ ಅವರ ಸಂಗ್ರಹದಲ್ಲಿ ರಾಶಿ ರಾಶಿ ಫೋಟೋಗಳು ಲಭ್ಯ.

  ರಾಜ್ ಅವರು ಶಲ್ಯ ಹೊದ್ದಿರುವ ಫೋಟೋ, ಗಂಧದಗುಡಿ ಚಿತ್ರದ ಆನೆ ದಂತದ ಮೇಲೆ ಕೂತಿರುವ ಭಾವಚಿತ್ರ, ಕಸ್ತೂರಿ ನಿವಾಸದ ಪಾರಿವಾಳದ ಫೋಟೋ ಇದುವರೆಗೂ ಅತ್ಯಧಿಕವಾಗಿ ಮಾರಾಟವಾಗಿವೆ ಎನ್ನುತ್ತಾರೆ ಬಾಬು. ತಮ್ಮ ಬಳಿ ಇರುವ ಅಪರೂಪದ ಫೋಟೋಗಳ ಪ್ರಿಂಟ್ ತೆಗೆದು ಅದಕ್ಕೊಂದು ಕಟ್ಟುಹಾಕಿ ಕೊಡುತ್ತಾರೆ.

  <ul id="pagination-digg"><li class="next"><a href="/news/23-mata-guruprasada-still-searching-dr-raj-photo-aid0052.html">Next »</a></li></ul>
  English summary
  Kannada film actor Dr Rajkumars (1929–2006) 84 Birthday ( 24th April) special. Rare photos of legendary artist from Karnataka. Photo collection by Suresh Babu and P Kumar, Sri Lakshmi Venkateshwara frame works BVK Iyengar road, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X