For Quick Alerts
  ALLOW NOTIFICATIONS  
  For Daily Alerts

  ಮೂಕಾಂಬಿಕೆಯ ಮೊರೆಹೋದ ದುನಿಯಾ ರಶ್ಮಿ!

  By * ಚಿತ್ರಗುಪ್ತ
  |

  ನಟಿ ರಶ್ಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇದೇ ಫೆ.22ರಂದು ಭೇಟಿನೀಡಿ, ದೇವಿಯ ದರ್ಶನ ಪಡೆದಿದ್ದಾರೆ. ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪೂರ್ಣಪ್ರಮಾಣದ ನಾಯಕಿಯಾಗಿ ಎಂಟ್ರಿ ಕೊಟ್ಟ ರಶ್ಮಿ, ಆ ನಂತರದ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಲಿಲ್ಲ. ರಶ್ಮಿ ಎಲ್ಲಿ ಹೋದರು ಎಂದು ಹುಡುಕುತ್ತಿರುವವರಿಗೆ ಇಲ್ಲಿದೆ ಉತ್ತರ.

  ರಮೇಶ್ ಸುರ್ವೆ ಎಂಬ ಪರಮ ಪುಣ್ಯಾತ್ಮ ನಿರ್ದೇಶಕನ ಸಾರರ್ಥ್ಯದಲ್ಲಿ ಮೂಡಿಬಂದ 'ಮಂದಾಕಿನಿ' ಎಂಬ ಎ ಪ್ಲಸ್ ಸರ್ಟಿಫಿಕೇಟ್ ಸಿನಿಮಾದಲ್ಲಿ ನಟಿಸಿ, ಮೂಲೆಗುಂಪಾದ ರಶ್ಮಿ ಅಲ್ಲಿ ಇಲ್ಲಿ ಚೂರು ಪಾರು ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡರು. ನಂತರ 'ಅನು' ಚಿತ್ರದಲ್ಲಿ ಪೂಜಾ ಗಾಂಧಿಯ ಜೂನಿಯರ್ ನಾಯಕಿಯಾಗಿ ಕಾಣಿಸಿಕೊಂಡರು. ಅದೂ ಮೂರೇ ದಿನಕ್ಕೆ ಫ್ಲಾಪ್ ದುನಿಯಾ ಸೇರಿಬಿಟ್ಟಿತು.

  ಮೂರು ವರ್ಷದಿಂದ ಇನ್ನೇನು ಸೆಟ್ಟೇರಲಿದೆ ಎಂಬ ಸುದ್ದಿಯನ್ನೇ ಹೊರಡಿಸುತ್ತಿರುವ 'ಚೆಲ್ಲಾ' ಎಂಬ ಚಿಲ್ಲರೆ ಸಿನಿಮಾಗೆ ಬುಕ್ ಆಗಿದ್ದು ಬಂತೇ ಹೊರತು ಅದು ಶೂಟಿಂಗ್ ಹಂತಕ್ಕೇ ಬರಲಿಲ್ಲ! ಇಷ್ಟೆಲ್ಲಾ ಸೋಲುಗಳಿಗೆ ಉತ್ತರ ಕಂಡುಕೊಳ್ಳಲಾಗದ ರಶ್ಮಿ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಹೋಗಿಬಂದಿರಬೇಕು ಎನ್ನುತ್ತಿದ್ದಾರೆ ಅವರ ಒಂದು ಕಾಲದ ಅಭಿಮಾನಿಗಳು!

  English summary
  Kannada actress Duniya Rashmi visits Mookambika Temple, Kollur on 22nd February for blessings of Goddess. Sources says that her earlier films like Mandakini and Anu with Pooja Gandhi are not doing well at the box office. So She offered special pooja for Goddess Mookambika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X