»   »  ಜನರನ್ನು ಬೆಚ್ಚಿ ಬೀಳಿಸುತ್ತಿರುವ ರಾಜ್ ಚಿತ್ರ

ಜನರನ್ನು ಬೆಚ್ಚಿ ಬೀಳಿಸುತ್ತಿರುವ ರಾಜ್ ಚಿತ್ರ

Subscribe to Filmibeat Kannada


ಇಮ್ರಾನ್ ಹಸ್ಮಿ, ಕಂಗನಾ ರಾನತ್ ಆಕ್ಟೀಂಗ್ ಸೂಪರ್, ಹೊಸಬ ಅಧ್ಯಾಯನ್ ಸುಮನ್ ಕೂಡ ಮಾಡೆಲಿಂಗ್ ನಿಂದ ಆಕ್ಟಿಂಗ್ ಗೆ ಇಳಿದಿದ್ದು ಸಾರ್ಥಕವಾಗಿದೆ. ಫೂಂಕ್ ,1920 ನಂತರ ಪ್ರೇಕ್ಷಕರನ್ನು ಬೆಚ್ಚಿಬೀಳಿಸುತ್ತಿದೆ ರಾಜ್ ಪ್ರಾಥಮಿಕ ವರದಿಗಳ ಪ್ರಕಾರ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಮೊದಲೇ ಮೂರ್ನಾಲ್ಕು ದಿನದ ಲಾಂಗ್ ವೀಕೇಂಡ್ ಬೇರೆ ಟಿಕೆಟ್ ಸಿಗೋದೇ ಕಷ್ಟ" ಹೋಗ್ಲಿ ಇದರ ಟ್ರೈಲರ್ ನಾದ್ರೂ ನೋಡಿ ಟೀಕೇಟ್ ಸಿಗೋ ತನಕ. ..

ನಿರ್ದೇಶಕ ಮೋಹಿತ್ ಸೂರಿ ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ಈವರೆಗೂ ನಾಲ್ಕು ಭಿನ್ನ ಅಭಿರುಚಿಯ ಚಿತ್ರಗಳನ್ನು ನೀಡಿರುವ ಮೋಹಿತ್, ಚಿತ್ರದ ಓಪನಿಂಗ್ ಕಂಡು ಖುಷಿಯಾಗಿದ್ದಾರೆ. ಜೆಹರ್ ,ಕಲ್ ಯುಗ್ ನಂತ ಹಿಟ್ ಹಾಗೂ ವೋ ಲಮ್ಹೆ, ಆವಾರಪನ್ ಅಂತಹ ವಿಮರ್ಶಕರ ಮೆಚ್ಚಿಗೆ ಪಡೆದ ಚಿತ್ರಗಳ ನಂತರ ನಿಗೂಢತೆಯ ಬೆನ್ನು ಹತ್ತಿದ ಮೋಹಿತ್, ತನ್ನ ಕಸಿನ್ ಇಮ್ರಾನ್ ನನ್ನು ಹಾಕಿಕೊಂಡು ಅಂಕಲ್ ವಿಕ್ರಮ್ ಭಟ್ ಹಾಗೂ ಮಹೇಶ್ ಭಟ್ ಅವರ ಆಶೀರ್ವಾದದೊಂದಿಗೆ ಮತ್ತೆ ಗೆಲುವಿನ ನಗೆ ಬೀರಲು ಸಿದ್ದ್ಧರಾಗಿದ್ದಾರೆ.

ರಬನೇ ಬನಾದಿ ಜೋಡಿ, ಚಾಂದಿನಿಚೌಕ್ ಟು ಚೈನಾದಂತಹ ಸಾಧಾರಣ ಕಥಾಹಂದರವುಳ್ಳ ಚಿತ್ರದ ನಂತರ ರಾಜ್ ಚಿತ್ರ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬುದು ಪಂಡಿತರ ಅಂಬೋಣ. ರಾಜ್ ಗೆ ಘಜಿನಿ ಮಾತ್ರ ಟಾಂಗ್ ಕೊಡಬಹುದಂತೆ. ಉತ್ತರ ಈ ವಾರದ ನಂತರ ಬಾಕ್ಸಾಫೀಸ್ ಗಳಿಕೆ ವಿವರ ಸಿಕ್ಕ ಮೇಲೆ ಹೇಳಬಹುದು.

(ದಟ್ಸ್ ಕನ್ನಡ ವಿಡಿಯೋ)

ಇದನ್ನೂ ನೋಡಿ:
ಚೇತನ್ ರ ಬಿರುಗಾಳಿ ಟ್ರೈಲರ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada