For Quick Alerts
  ALLOW NOTIFICATIONS  
  For Daily Alerts

  ಏಕಕಾಲಕ್ಕೆ ಬಿಡುಗಡೆ :ಅಣ್ಣಾಬಾಂಡ್ ಹೊಸ ಇತಿಹಾಸ

  |

  ಚಿತ್ರೀಕರಣದಿಂದ ಇದುವರೆಗೂ ಒಂದಲ್ಲಾ ಒಂದು ಕುತೂಹಲ ಮೂಡಿಸುತ್ತಲೇ ಬರುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಣ್ಣಾಬಾಂಡ್ ಕನ್ನಡದಲ್ಲಿ ಹೊಸ ಇತಿಹಾಸ ನಿರ್ಮಿಸುವತ್ತ ಸಾಗಿದೆ. ಈ ಚಿತ್ರ ರಾಜ್ಯದಲ್ಲಿ ಅಲ್ಲದೇ ಕುವೈಟ್ ನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.

  ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಅಣ್ಣಾಬಾಂಡ್ ಚಿತ್ರ ಕುವೈಟ್ ನಲ್ಲಿ ಮೇ ಮೂರರಂದು (ಸದ್ಯಕ್ಕೆ ಚಿತ್ರ ಬಿಡುಗಡೆಗೆ ನಿಗದಿಯಾಗಿರುವ ದಿನ) ರಿಲೀಸ್ ಆಗಲಿದೆ. ಇದಕ್ಕಾಗಿ ಹತ್ತು ದಿನಗಳಿಗೆ ಸಿನಿಮಾ ಮಂದಿರವನ್ನೂ ಬುಕ್ ಮಾಡಲಾಗಿದೆ ಎನ್ನುವ ವರದಿ ಕೂಡಾ ಲಭ್ಯವಾಗಿದೆ.

  ಮಂಗಳೂರು, ಉಡುಪಿ ಮೂಲದ ಕನ್ನಡಿಗರು ಹೆಚ್ಚಾಗಿರುವ ಕುವೈಟ್ ನಲ್ಲಿ ಅಣ್ಣಾಬಾಂಡ್ ಬಿಡುಗಡೆಯಾಗುತ್ತಿರುವುದು ಆ ಭಾಗದ ಕನ್ನಡಿಗರಿಗೆ ಸಂತಸ ತಂದಿದೆ. ಆಸ್ಟ್ರೇಲಿಯಾ, ಅಮೇರಿಕಾ, ದುಬೈ, ಇಂಗ್ಲೆಂಡ್ ನಲ್ಲೂ ಚಿತ್ರ ಬಿಡುಗಡೆಗೆ ಮಾತುಕತೆ ನಡೆಯುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

  ದೇಶದ ಇತರ ಭಾಗಗಳಲ್ಲಿ ಮುಂಬೈ, ಚೆನ್ನೈ, ಹೈದರಾಬಾದ್, ದೆಹಲಿ, ಪುಣೆಯಲ್ಲೂ ಅಣ್ಣಾಬಾಂಡ್ ಚಿತ್ರ ಏಕಕಾಲದಲ್ಲಿ ರಿಲೀಸ್ ಆದರೆ ಆಶ್ಚರ್ಯ ಪಡಬೇಕಾಗಿಲ್ಲ.

  English summary
  For the first time in the history of Kannada film, a Sandalwood film is releasing simultaneously in foreign country. Film is hitting the screens in Kuwait.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X