»   »  ಇನ್ನು ತಮಿಳು ಚಿತ್ರಗಳಲ್ಲೂ ಸನ್ನಿ ಲಿಯೋನ್ ಮೋಡಿ

ಇನ್ನು ತಮಿಳು ಚಿತ್ರಗಳಲ್ಲೂ ಸನ್ನಿ ಲಿಯೋನ್ ಮೋಡಿ

Posted By:
Subscribe to Filmibeat Kannada

ಸನ್ನಿ ಲಿಯೋನ್ ಗೊತ್ತಲಾ!? ಅದೇ ನೀಲಿ ಚಿತ್ರಗಳ ಮೂಲಕ ತಮ್ಮ ಸ್ಫುರದ್ರೂಪವನ್ನು ಹೊರಚೆಲ್ಲುವ ಚೆಲುವೆ! ವಿಶ್ವ ಪಾರ್ನ್ ಸ್ಟಾರ್ ಅನಿಸಿದ್ದರೂ ಈಗಾಗಲೇ ಬಾಲಿವುಡ್ ಲೋಕದಲ್ಲಿ ತಮ್ಮ ವಿಶಿಷ್ಟ ಛಾಪು ಮೂಡಿಸಿರುವ ಸನ್ನಿ, ಹಿಂದಿ ಲೋಕದಲ್ಲಿ ಹಾಟ್ ಕೇಕ್ ನಂತೆ ಬಿಕರಿಯಾಗುವ ಸನ್ನಿ ಮೋಡಿಯ ಚಿತ್ರಗಳು ಇನ್ನು ತಮಿಳು ಚಿತ್ರರಂಗದಲ್ಲೂ ಕಾಣಿಸಿಕೊಳ್ಳಲಿವೆ.

ತಮಿಳಿನಲ್ಲೂ ಸಮೂಹ ಸನ್ನಿ: ಹೌದು, ಸನ್ನಿ ಲಿಯೋನ್ ಎಂಬ ಮಾದಕ ಮೈಮಾಟದ ನಟಿ ದಕ್ಷಿಣ ಚಿತ್ರರಂಗಕ್ಕೆ ಹಾರಲಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಬಾಲಿವುಡ್ ನಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ಸನ್ನಿ ಈಗ ಕಾಲಿವುಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

25-bollywood-actress-sunny-leone-to-shake-leg-in-tamil-film-vadacurry

ಕಾಲಿವುಡ್ ಸೀರೆಯಲ್ಲಿ ನಾಚಿ ನೀರಾಗಲಿದ್ದಾಳೆ ಸನ್ನಿ: ವಡಾಕರ್ರಿ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಿರ್ದೇಶಕ ಶರವಣರಾಜನ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಡಿಸೆಂಬರಿನಲ್ಲಿ ಈ ತುಣುಕು ಹಾಡಿನ ಚಿತ್ರೀಕರಣ ನಡೆಯಲಿದೆ.

ಹಾಡಿನ ಕಲ್ಪನೆಯೇ ಸಾಕು ಸನ್ನಿ ಅಭಿಮಾನಿಗಳಿಗೆ ಪ್ರೇಮ ಕಚಗುಳಿಯಿಡಲು. ಚಿತ್ರ ನಾಯಕ ಜೈ ನೀಲಿ ತಾರೆಯ ಜತೆ ತಮ್ಮನ್ನು ಕಲ್ಪಿಸಿಕೊಂಡು ಮಿಂಚುವ ಹಾಡು ಇದಾಗಿದೆ. ಆದರೂ ಇದು ಐಟಂ ಸಾಂಗ್ ಅಲ್ಲ ಎಂಬುದು ನಿರ್ದೇಶಕ ಶರವಣರಾಜನ್ ಅವರ ವಾದ. ಯಾವುದಾದರೂ ಆಗಿರಲಿ ಪಡ್ಡೆ ಹೈಕುಳಗಳಿಗೆ ಸನ್ನಿ ಸಪುಷ್ಠ ಭೋಜನ ಬಡಿಸಲಿದ್ದಾಳೆ.

ಅದೊಮ್ಮೆ ನೇರವಾಗಿ ನಟಿ ಸನ್ನಿ ಲಿಯೋನ್ ಬಳಿ ತೆರಳಿ ಹೀಗ್ಹೀಗೆ ಒಂದು ಚಿತ್ರ ಮಾಡ್ತಿದ್ದೇವೆ. ಅದರಲ್ಲಿ ನಿಮ್ಮ ಪಾತ್ರ ಹೀಗಿದೆ ಎಂದು ನಿವೇದಿಸಿಕೊಂಡೆವು. ಅವರು ಬೇರೆ ಏನನ್ನೂ ಯೋಚಿಸದೇ ಅಲ್ಲೇ ತಥಾಸ್ತು ಅಂದುಬಿಟ್ಟರು. ದಯಾನಿಧಿ ಅಳಗಿರಿ ನಿರ್ಮಾಣದ Vadacurry ಚಿತ್ರದಲ್ಲಿ ಸನ್ನಿ ಲಿಯೋನ್ ಸೀರೆಯಲ್ಲಿ ನಾಚಿ ನೀರಾಗಲಿದ್ದಾಳೆ ಎಂದು ಚಿತ್ರ ತಂಡ ತಿಳಿಸಿದೆ.

English summary
Bollywood actress Sunny Leone to shake leg in Tamil film Vadacurry. The news has been confirmed by director Saravanarajan. It will be shot in December. The director claims that there will be a scene where hero Jai dreams of dancing with porn star Sunny Leone.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada