For Quick Alerts
  ALLOW NOTIFICATIONS  
  For Daily Alerts

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ಬ್ರೈನ್ ಸ್ಕ್ಯಾನ್

  By Rajendra
  |

  ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬ್ರೈನ್ ಸ್ಕ್ಯಾನ್‌ಗೆ ಒಳಗಾಗಿದ್ದಾರೆ. ಕಾರಣ ಏನು ಎಂದರೆ, ನಾವು ಮೇ.1ರಂದು ನಡೆದ ಘಟನೆಯನ್ನು ನೆನಪಿಸಿಕೊಳ್ಳಬೇಕು. ಅಂದು ಶಿವಣ್ಣ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪತ್ನಿ ಸಮೇತ ಹೋದಾಗ ಸ್ವಾಗತ ಕಮಾನು ನೇರವಾಗಿಅವರ ತಲೆ ಮೇಲೆ ಬಂದು ಬಿದ್ದಿತ್ತು.

  ಅಂದು ಶಿವಣ್ಣ ಏನೂ ಆಗಿಲ್ಲ. ಸಣ್ಣ ಪೆಟ್ಟಾಗಿದೆ ಅಷ್ಟೆ ಎಂದಿದ್ದರು. ಆಗ ನಡೆದ ಘಟನೆಯನ್ನು ಎಲ್ಲರೂ ಮರೆತಿದ್ದರು. ಅಂದಿನ ಪೆಟ್ಟು ಒಂಥರಾ ಲೇಟ್ ಪಾಯಿಸನ್ ತರಹಾ ಶಿವಣ್ಣನಿಗೆ ಈಗ ತೊಂದರೆ ಕೊಡುತ್ತಿದೆ. ಅವರಿಗೆ ಆಗಾಗ ಕುತ್ತಿಗೆ ಮತ್ತು ಬೆನ್ನು ನೋವು ಕಾಡುತ್ತಿದೆ. ಏನಾಗಿದೆ ಎಂದು ಪರೀಕ್ಷಿಸಿಕೊಳ್ಳಲು ಶಿವಣ್ಣ ಹಲವಾರು ಆಸ್ಪತ್ರೆಗಳನ್ನು ಸುತ್ತಿದ್ದಾರೆ.

  ಮೂಲಗಳ ಪ್ರಕಾರ, ಅವರ ತಲೆಗೆ ಬಿದ್ದ ಪೆಟ್ಟಿನಿಂದ ಈಗ ಅವರು ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದರೆ Abnormal Vascular Malfunctionನಿಂದ ಬಳಲುತ್ತಿದ್ದಾರಂತೆ. ಆದರೆ ಶಿವಣ್ಣ ಆ ರೀತಿ ಏನೂ ಇಲ್ಲ. ಕುತ್ತಿಗೆ ಹಾಗೂ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯಷ್ಟೆ ಎಂದಿದ್ದಾರೆ. ಆದರೆ ಬೆಂಗಳೂರು ವಿಕ್ರಂ ಆಸ್ಪತ್ರೆಯ ಮೂಲಗಳು ಮಾತ್ರ ಇದು ಸೀರಿಯಸ್ ವಿಷಯ ಅನ್ನುತ್ತಿವೆ.

  Abnormal Vascular Malfunctionನನ್ನು ಕಡೆಗಣಿಸಿದರೆ ಮುಂದೆ ತೀವ್ರ ಪರಿಣಾಮಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈಗಾಗಲೆ ಶಿವಣ್ಣನ ಬ್ರೈನ್ ಸ್ಕ್ಯಾನ್ ಮಾಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಪ್ಯಾರಿಸ್‌ನ ಆಸ್ಪತ್ರೆಗೆ ರವಾನಿಸಲಾಗಿದೆಯಂತೆ. ಯಾವುದಕ್ಕೂ ಒಮ್ಮೆ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲೂ ಪರೀಕ್ಷಿಸಿಕೊಳ್ಳುವಂತೆ ವೈದ್ಯರು ಶಿವಣ್ಣನಿಗೆ ಸಲಹೆ ನೀಡಿದ್ದಾರೆ. ಆದರೆ ಶಿವಣ್ಣ ಈ ಎಲ್ಲಾ ಸಂಗತಿಗಳನ್ನು ಸರಾಸಗಟಾಗಿ ತಳ್ಳಿ ಹಾಕಿದ್ದಾರೆ. (ಮೂಲ: ಬೆಂಗಳೂರು ಮಿರರ್)

  English summary
  Hat trick hero Shivarajkumar underwent a brain scan following a freak accident at a public function on May 1. When a makeshift arch collapsed on actor Shiva Rajkumar’s head, he underwent a series of head and neck scans. One of the scans reportedly revealed that he is suffering from abnormal vascular malfunction, a condition which calls for immediate treatment, Bangalore Mirror quotes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X