»   » ವಿಷ್ಣು, ಅಶ್ವತ್ಥ್ ನೆನಪಿನಾರ್ಥ ವಿಚಾರ ಸಂಕಿರಣ

ವಿಷ್ಣು, ಅಶ್ವತ್ಥ್ ನೆನಪಿನಾರ್ಥ ವಿಚಾರ ಸಂಕಿರಣ

Posted By:
Subscribe to Filmibeat Kannada

'ಕನ್ನಡ ರಂಗಭೂಮಿ, ಸಿನಿಮಾ ಮತ್ತ್ತು ಸಂಗೀತ' ಕುರಿತು ಒಂದು ದಿನದ ವಿಚಾರ ಸಂಕಿರಣ ಬೆಂಗಳೂರು ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮ್ ಮತ್ತು ಕಲ್ಚರಲ್ ಸೊಸೈಟಿಯಲ್ಲಿ ಫೆಬ್ರವರಿ 27ರಂದು ನಡೆಯಲಿದೆ.

ಇತ್ತೀಚೆಗೆ ಅಗಲಿದ ಡಾ.ವಿಷ್ಣುವರ್ಧನ್, ಸಿ ಅಶ್ವತ್ಥ್, ಕೆ ಎಸ್ ಅಶ್ವತ್ಥ್, ಚಿಂದೋಡಿ ಲೀಲಾ ಮತ್ತು ಬಿ ವಿ ವೈಕುಂಠರಾಜು ಅವರ ನೆನಪಿಗಾಗಿ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಹಿರಿಯ ನಟ, ನಿರ್ದೇಶಕ ಕೆಎಸ್ ಎಲ್ ಸ್ವಾಮಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧಕ್ಷ ಟಿ ಎಸ್ ನಾಗಾಭರಣ, ಎನ್ ಮಂಗಳ, ಸಿ ಆರ್ ಸಿಂಹ, ಎನ್ ಎಸ್ ಶ್ರೀಧರಮೂರ್ತಿ ಭಾಗವಹಿಸಲಿದ್ದಾರೆ.

ವಿಚಾರ ಸಂಕಿರಣ ಎರಡು ಹಂತಗಳಲ್ಲಿ ನಡೆಯಲಿದ್ದು ಡಾ.ಎನ್.ಎಸ್ ಲಕ್ಷ್ಮಿನಾರಾಯಣ ಭಟ್, ಬಿ ಜಯಶ್ರೀ, ಡಾ.ಶಾಮಲಾ ಭಾವೆ, ಡಾ.ವಿಜಯಾ, ವಿ ಎನ್ ಸುಬ್ಬರಾವ್ ಸೇರಿದಂತೆ ಮತ್ತಿತರ ಗಣ್ಯರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada