»   » ಎದೆಭಾರ ಕುಗ್ಗಿಸಲು ನಮಿತಾ ಮಲೇಷಿಯಾ ಯಾತ್ರೆ

ಎದೆಭಾರ ಕುಗ್ಗಿಸಲು ನಮಿತಾ ಮಲೇಷಿಯಾ ಯಾತ್ರೆ

Posted By: Staff
Subscribe to Filmibeat Kannada
Namitha
ಫಿಟ್ನೆಸ್ ಇದು ಸದ್ಯಕ್ಕೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಮೂಲಮಂತ್ರ. ತಿನ್ನುವ ಸಿಹಿ ಮಿತಿಯಲ್ಲಿದ್ದರೆ ಮಾತ್ರ ಸವಿಯಾಗಿರುತ್ತದೆ, ಅತಿಯಾದರೆ ಅಮೃತವೂ ವಿಷವೇ. ಯೌವನದ ಹೊಳೆಯಲ್ಲಿ ಈಜಾಡುವಾಗ ಬಾಹ್ಯ ಸೌಂದರ್ಯದತ್ತಲೇ ಗಮನವಿರುವ ಸಿನೆಮಾ ನಟಿಯರಿಗೆ ವಯಸ್ಸು ಮಾಗಿದಂತೆಲ್ಲ ಆಂತರಿಕ ಸೌಂದರ್ಯದತ್ತ ಮನಸ್ಸು ಎಳೆಯುತ್ತಿದೆ.

ಕೆಲವೇ ದಿನಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪಡ್ಡೆಹುಡುಗರಿಂದ ರಸಿಕತೆಯ ನಮೂನೆಯನ್ನು ಫಸ್ಟ್ ಹ್ಯಾಂಡಾಗಿ ಅನುಭವಿಸಿದ್ದ ದಕ್ಷಿಣ ಭಾರತದ ಸೆಕ್ಸಿ ನಟಿ ನಮಿತಾಗೆ ಈ ಆಂತರಿಕ ಸೌಂದರ್ಯ ಮತ್ತು ಬಹಿರಂಗ ಸೌಂದರ್ಯದ ಪ್ರಜ್ಞೆ ಈಗ ಜಾಗೃತವಾಗಿದೆ. ಯೌವನದ ಹೊಳೆಯಲ್ಲಿ ಸಾಕಷ್ಟು ಈಜಾಡಿದ ಈ ನಟಿಗೆ ಬಾಹ್ಯ ಸೌಂದರ್ಯ ಅತಿಯಾದಾಗಲೇ ಆಂತರಿಕ ಸೌಂದರ್ಯದ ಅರಿವು ಉಂಟಾಗಿದೆ.

ನಮಿತಾಳ ಬಂಡವಾಳ ಆಕೆಯ ಮುದ್ದು ಮುಖವಲ್ಲ ದಢೂತಿ ದೇಹ ಎಂಬ ರಹಸ್ಯ, ನಿರ್ಮಾಪಕ ಮತ್ತು ನಿರ್ದೇಶಕರಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ತಿಳಿದಿದೆ. ಅದನ್ನೇ ಬಂಡವಾಳ ಮಾಡಿಕೊಂಡು ನಮಿತಾಳನ್ನು ಸಾಕಷ್ಟು ಸಿನೆಮಾಗಳಲ್ಲಿ ತೊಪ್ಪೆಯಾಗಿಸಿದ್ದಾರೆ. ಅನೇಕ ಸಿನೆಮಾ ಕಾರ್ಯಕ್ರಮಗಳಲ್ಲಿ ಕೂಡ ವೇಲ್ ಇಲ್ಲದ ವಿ ಶೇಪಿನ ಮೇಲುಡುಪು ಧರಿಸಿ, ಸಿನಿಪ್ರೇಮಿಗಳ ಹೃದಯದ ಬಡಿತದ ದಿಕ್ಕು ತಪ್ಪಿಸಿದ ಆರೋಪ ಎದುರಿಸುತ್ತಿದ್ದಾಳೆ ನಮಿತಾ.

ನೀಲಕಂಠ ಚಿತ್ರದಲ್ಲಿ ಕೂಡ ರವಿಚಂದ್ರನ್ ಅಮಿತವಾಗಿ ನಮಿತಾಳ ಮೇಲೆ ಹಾವಿನಂತೆ ಹರಿದಾಡಿದ್ದನ್ನು ಕನ್ನಡಿಗರು ಮರೆತಿಲ್ಲ, ನಮಿತಾ ಮರೆತಿರಬಹುದು. ಕ್ಲೋಸ್ಡ್ ಶಾಟ್ಸ್ ತೆಗೆಯುವಾಗ ವೈಡ್ ಆಂಗಲ್ ಲೆನ್ಸ್ ಬಳಸಬೇಕಾದಂಥ ಪರಿಸ್ಥಿತಿ ಅವಳಿಗೀಗ ಬಂದುಬಿಟ್ಟಿದೆ.

ಕನ್ನಡಿಯಲ್ಲಿ ತನ್ನನ್ನೊಮ್ಮೆ ಸರಿಯಾಗಿ ನೋಡಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳುವ ಮುನ್ನ ಅನೇಕರಿಗೆ ಸತ್ಯದ ಅರಿವಾಗುವುದಿಲ್ಲ. ಈಗ ಅಮೃತವೂ ವಿಷವಾಗುವ ಮುನ್ನ ನಮಿತಾ ಎಚ್ಚೆತ್ತುಕೊಂಡಿದ್ದಾರೆ. ಚಿತ್ರರಂಗಕ್ಕೆ ಅಡಿಯಿಟ್ಟಾಗ ಮೂವತ್ತೆರಡು ಇಪ್ಪತ್ತೆಂಟು ಮೂವತ್ತಾಲ್ಕು ಇದ್ದದ್ದು ಚಿತ್ರರಂಗದ ಹಾಲುತುಪ್ಪ ಮೈಸೇರಿದನಂತರ ನಲವತ್ತು ಮೂವತ್ತೆಂಟು ನಲವತ್ನಾಲ್ಕಾಗಿದೆ. ಇದು ಇನ್ನೂ ಹೆಚ್ಚಾದರೆ ಅಪಾಯವೆಂದರಿತ ನಮಿತಾಳ ಪರ್ಸನಲ್ ಅಡ್ವೈಸರ್, ದೇಹದ ಸುತ್ತಳತೆಯನ್ನು ಕುಗ್ಗಿಸಿಕೊಳ್ಳಲು ಸಲಹೆ ನೀಡಿದ್ದಾರೆ.

ಅವರ ಸಲಹೆ ಮತ್ತು ಚಿತ್ರರಂಗದ ಟ್ರೆಂಡ್‌ಗಳನ್ನು ಗಂಭೀರವಾಗಿ ಗಮನಿಸುತ್ತಿರುವ ನಮಿತಾ ಜಾಣ ನಿರ್ಧಾರವನ್ನು ಕೈಗೊಂಡಿದ್ದಾರೆ. ಇಲ್ಲೇ ಇದ್ದು ಏರೋಬಿಕ್ಸ್ ಎಕ್ಸರ್‌ಸೈಸ್ ಮಾಡಿದ್ದರೂ ಆಗುತ್ತಿತ್ತು. ಆದರೆ ಇನ್ನೊಬ್ಬ ಸುಂದರಕಂಗಳ ತಾರೆ ನಯನತಾರ ಸೂಚನೆಯ ಮೇರೆಗೆ ಕಾಸ್ಮೆಟಿಕ್ ಸರ್ಜರಿಗಾಗಿ ಮಲೇಶಿಯಾಗೆ ಹಾರುತ್ತಿದ್ದಾರೆ. ಎರಡು ವರುಷಗಳ ಹಿಂದೆ ನಯನತಾರಾ ಕೂಡ ಇದೇ ಬಗೆಯ ಸರ್ಜರಿ ಮಾಡಿಸಿಕೊಂಡಿದ್ದರು.

ನಮಿತಾಳಿಂದ ನಮ್ಮ ಕನ್ನಡದ ಅನೇಕ ಬಳುಕುವ ಬಳ್ಳಿಗಳು ಟಿಪ್ಸ್‌ಗಳನ್ನು ತೆಗೆದುಕೊಳ್ಳುವುದು ಒಳಿತು. ಬೆಟರ್ ಲೇಟ್ ದ್ಯಾನ್ ನೆವರ್.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada