»   »  ಬಾಹುಬಲ ಹೆಚ್ಚಿಸಿಕೊಳ್ಳಲು ಯೋಗೀಶ್ ಕಸರತ್ತು!

ಬಾಹುಬಲ ಹೆಚ್ಚಿಸಿಕೊಳ್ಳಲು ಯೋಗೀಶ್ ಕಸರತ್ತು!

Posted By:
Subscribe to Filmibeat Kannada
Yogish
ಬಹಳಷ್ಟು ಸಿನಿಮಾ ತಾರೆಗಳು ಮೈಭಾರ ಇಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ ಯೋಗೀಶ್ ಯಾನೆ ಲೂಸ್ ಮಾದ ಮಾತ್ರ ಒಂಚೂರು ತೂಕ ಹೆಚ್ಚಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದಾರೆ. ತೆಳ್ಳಗಿನ ಮೈಕಟ್ಟನ್ನು ಹುರಿಗೊಳಿಸಲು ಶ್ರಮಿಸುತ್ತಿದ್ದಾರೆ. ಮುಂಜಾನೆ ಬೆಂಗಳೂರಿನ ಕೋಣಕುಂಟೆಯಲ್ಲಿ ಜಾಗಿಂಗನ್ನು ಶುರು ಹಚ್ಚಿಕೊಂಡಿದ್ದಾರೆ.

ಹಾಗೇ ಜಾಗಿಂಗ್ ಮಾಡಿಕೊಂಡು ಅಲ್ಲೇ ಸನಿಹದಲ್ಲಿರುವ ಜಿಮ್ ಕೇಂದ್ರಕ್ಕೆ ಹೋಗುತ್ತಾರೆ. ನನ್ನ ತೆಳ್ಳಗಿನ ದೇಹ ನೋಡಿ ಬಹಳಷ್ಟು ಗೆಳೆಯರು ಒಂಚೂರು ದಷ್ಟಪುಷ್ಟವಾಗಬೇಕು ಎಂದು ಸಲಹೆ ನೀಡಿದರು. ಹಾಗಾಗಿ ಈ ಕಸರತ್ತು ಮಾಡುತ್ತಿದ್ದೇನೆ ಎನ್ನುತ್ತಾರೆ ಯೋಗೀಶ್.

ಜಿಮ್ನಾಸ್ಟಿಕ್ ತರಗತಿಗಳಿಗೂ ಯೋಗೀಶ್ ಭೇಟಿ ನೀಡುತ್ತಿದ್ದಾರೆ. ಹೆಚ್ಚು ದೃಢಕಾಯನಾಗಲು ಮತ್ತ್ತು ಬಾಹುಬಲವನ್ನು ಹೆಚ್ಚಿಸಿಕೊಳ್ಳಲು ಈ ಕಷ್ಟ ತಪ್ಪಿದ್ದಲ್ಲ ಎಂಬುದು ಯೋಗೀಶ್ ವಿವರಣೆ. ಬೆಳಗ್ಗೆಯೇ ಎದ್ದು ಹೋಗುವುದು ಒಂಚೂರು ಕಷ್ಟ. ಬೆಳಗಿನ ಸಿಹಿ ನಿದ್ದೆಯನ್ನು ಮಿಸ್ ಆಗುತ್ತಿದ್ದೇನೆ. ಇಷ್ಟೆಲ್ಲಾ ಕಷ್ಟಪಟ್ಟಿದ್ದಕ್ಕೆ ತೋಳ್ಬಲ ಸುಧಾರಿಸಿ ಅಂಗಸೌಷ್ಟವ ಹೆಚ್ಚಿದೆಯಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada