For Quick Alerts
  ALLOW NOTIFICATIONS  
  For Daily Alerts

  ಈಗ ಚಿತ್ರದ ನಿಜವಾದ ಹೀರೋ ಸುದೀಪ್, ಡೌಟೇ ಇಲ್ಲ

  |
  <ul id="pagination-digg"><li class="next"><a href="/news/26-kichcha-sudeep-eega-release-may-30-2012-ss-rajamouli-aid0172.html">Next »</a></li></ul>

  ಕನ್ನಡದ ಪ್ರತಿಭಾವಂತ ನಟ ಕಿಚ್ಚ ಸುದೀಪ್ ಅವರಿಗೆ ಪ್ರತಿಭೆಯ ಜೊತೆ ಅದೃಷ್ಟವೂ ಹಿಂಬಾಲಿಸಿದೆ. ಎಸ್.ಎಸ್. ರಾಜಮೌಳಿ ನಿರ್ದೇಶನದ ತೆಲುಗಿನ 'ಈಗ' ಚಿತ್ರದಲ್ಲಿ ಅವರು ಹೀರೋ ಅಲ್ಲ, ವಿಲ್ಲನ್ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಪಾತ್ರದ ದೃಷ್ಟಿಯಿಂದ ಈಗ ಚಿತ್ರದ ನಿಜವಾದ ಹೀರೋ ಸುದೀಪ್, ಸಂಶಯವೇ ಇಲ್ಲ.

  ಇದಕ್ಕೆ ಪುಷ್ಟಿ ನೀಡುವ ಸಾಕಷ್ಟು ಪುರಾವೆಗಳಿವೆ. 'ಈಗ' ಚಿತ್ರದ ನಾಯಕ ಯಾರೆಂದರೆ ಬರುವ ಉತ್ತರ ನಾಣಿ. ನಾಯಕಿಗೆ ಉತ್ತರ ಸಮಂತಾ. ಖಳನಾಯಕ ಪ್ರಶ್ನೆಗೆ ಉತ್ತರ ಸುದೀಪ್. ಆದರೆ ಈಗ' ಚಿತ್ರದ ಪ್ರಚಾರದಲ್ಲಿ, ಎಲ್ಲೂ ನಾಯಕ ನಾಣಿ ಹೈಲೈಟ್ ಆಗುತ್ತಿಲ್ಲ. ಅದರೆ ವಿಲ್ಲನ್ ಸುದೀಪ್‌ ಎಲ್ಲಾ ಕಡೆ ಕಾಣುತ್ತಾರೆ. ಟ್ವಿಟ್ಟರ್, ಫೇಸ್‌ ಬುಕ್‌ಗಳಲ್ಲೂ ಸುದೀಪ್‌ ಅವರದ್ದೇ ಹೆಸರು.

  ಇನ್ನು 'ಈಗ' ಚಿತ್ರದ ವೆಬ್‌ ಸೈಟಿಗೆ ಹೋದರೂ ಮೊದಲು ಕಾಣೋದು ಸುದೀಪ್ ಹೆಸರೇ. ನಿರ್ದೇಶಕ ರಾಜಮೌಳಿ ಎಲ್ಲೇ ಹೋದರೂ ಹೇಳೋದು ಸುದೀಪ್ ಹೆಸರನ್ನೇ ಹೊರತು, ನಾಣಿಯದ್ದನ್ನಲ್ಲ. ಚಿತ್ರದ ಟ್ರೇಲರ್ ಗಳಲ್ಲಂತೂ ಕೇವಲ ಸುದೀಪ್...ಸುದೀಪ್ ಮಾತ್ರ. ಅಂದರೆ ಚಿತ್ರದ ಕಥೆಯ ಪ್ರಕಾರ ನಿಜವಾದ ನಾಯಕ ಸುದೀಪ್, ನಾಣಿ ಅಲ್ಲ. ಸುದೀಪ್ ಪಾತ್ರವೇ ಹೆಚ್ಚು ಶಕ್ತಿಯುತವಾದದ್ದು ಎನ್ನಬಹುದು.

  ಸುದೀಪ್ ಖಳನಟನ ಪಾತ್ರ ಮಾಡುತ್ತಾರೆಂಬ ಸುದ್ದಿ ಕೇಳಿ ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ಕೂಡ ಬೆರಗಾಗಿತ್ತು. ಖಳನಟನ ಪಾತ್ರವಾದರೂ ಸುದೀಪ್ ಒಪ್ಪಿಕೊಂಡಿದ್ದಾರೆ ಎಂದ ಮೇಲೆ ಆ ಪಾತ್ರಕ್ಕೇ ಹೆಚ್ಚು ಅವಕಾಶ ಇರಬಹುದು ಎಂದು ಅನುಮಾನ ಎಲ್ಲೆಡೆ ವ್ಯಕ್ತವಾಗಿತ್ತು. ಅದೀಗ ನಿಜವಾಗಿದೆ. ಹೋಗಿ ಹೋಗಿ ನಾಯಕನ ಕೈಯಿಂದ ಪೆಟ್ಟು ತಿಂದು ಕ್ಲೈಮ್ಯಾಕ್ಸ್‌ ನಲ್ಲಿ ಸಾಯುವ ಪಾತ್ರವಾಗಿದ್ದರೆ ಕಿಚ್ಚ ಸುದೀಪ್ ಒಪ್ಪಿಕೊಳ್ಳುತ್ತಿರಲಿಲ್ಲ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/news/26-kichcha-sudeep-eega-release-may-30-2012-ss-rajamouli-aid0172.html">Next »</a></li></ul>
  English summary
  SS Rajamouli Directed, Kannada actor Kichcha Sudeep acted Telugu Movie Eega Releases on May 30 2012. It is Confirmed that Villon Sudeep Role is more important than Hero Nani role. Samatha is the Heroine. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X