For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರಗಳ ಸ್ಪರ್ಧೆ ಬಗ್ಗೆ ಪರಿಯ ಪರಿಪರಿ ಪ್ರಶ್ನೆ

  |

  ನಾಳೆ (ಏಪ್ರಿಲ್ 27, 2012) ರಾಜ್ಯಾದ್ಯಂತ ಹಾಗೂ ಚೆನ್ನೈ, ಮುಂಬೈ, ದೆಹಲಿ, ಕ್ಯಾಲಿಪೋರ್ನಿಯಾದಲ್ಲೂ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರ 'ಪರಿ' ನಿನ್ನೆ ವಿವಾದವೊಂದನ್ನು ಸೃಷ್ಟಿಸಿಕೊಂಡಿದೆ. ನಮ್ಮ ಚಿತ್ರ ಬಿಡುಗಡೆಯಾದ ತಕ್ಷಣವೇ, ಒಂದು ವಾರದೊಳಗೇ ಬಿಗ್ ಬಜೆಟ್ ಚಿತ್ರ ಅಣ್ಣಾಬಾಂಡ್ ಬಂದರೆ ನಮ್ಮ ಗತಿಯೇನು ಎಂಬುದು ಅವರ ಪ್ರಶ್ನೆ.

  ಈ ಮೊದಲು ಅಣ್ಣಾಬಾಂಡ್ ಬಿಡುಗಡೆ ದಿನಾಂಕ ಮೇ 3 ಅಥವಾ ಅದರ ನಂತರ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿತ್ತು.

  ಆದರೀಗ ಮೇ 1, 2012 ಎಂಬುದು ಪಕ್ಕಾ ಆದ ಹಿನ್ನಲೆಯಲ್ಲಿ ಪರಿ ಚಿತ್ರತಂಡ ಪೇಚಿಗೆ ಸಿಲುಕಿದೆ. ಅಣ್ಣಾಬಾಂಡ್ ಬಿಗ್ ಬಜೆಟ್ ಚಿತ್ರ, ನಮ್ಮದು ಕಡಿಮೆ ಬಜೆಟ್. ಸಹಜವಾಗಿ ಪ್ರಮೋಶನ್, ಚಿತ್ರಮಂದಿರಗಳ ಸಂಖ್ಯೆ ಹೀಗೆ ಎಲ್ಲ ವಿಷಯಗಳಲ್ಲೂ ನಾವು ಅಣ್ಣಾಬಾಂಡ್ ಚಿತ್ರಕ್ಕೆ ಪೈಪೋಟಿ ನೀಡಲು ಸಾಧ್ಯವಿಲ್ಲ. ಹೀಗಿರುವಾಗ ಪರಿ ಬಿಡುಗಡೆಯಾದ 5ನೇ ದಿನಕ್ಕೆ ಅಣ್ಣಾಬಾಂಡ್ ಬಿಡುಗಡೆಯಾಗುವುದು ಯಾವ ನ್ಯಾಯ ಎಂಬುದು ಅವರ ಅಳಲು.

  ಇದಕ್ಕೆ ಸಂಬಂಧಿಸಿ ನ್ಯಾಯ ಕೇಳಲು ಈಗಾಗಲೇ ನಿರ್ಧರಸಿರುವ ಪರಿ ಚಿತ್ರತಂಡ ಮಾಧ್ಯಮದ ಮುಂದೆ ಬಂದಿದೆ. ಜೊತೆಗೆ ಮುಂದಿನ ಹಜ್ಜೆಯ ಬಗ್ಗೆ ಯೋಚಿಸತೊಡಗಿದೆ. ಕಾರಣ, ಬೇರೆ ಬಾಷೆಯ ಚಿತ್ರಗಳು ಪೈಪೋಟಿ ಎದುರಿಸುವುದೇ ಕಷ್ಟವಾಗಿರುವಾಗ ಕನ್ನಡ ಚಿತ್ರಗಳೆ ಸ್ಪರ್ಧೆಗೆ ಬಿದ್ದರೆ ಹೇಗೆ? ಆದರೆ ಪರಿ ಚಿತ್ರತಂಡ ಪರಿಪರಿಯಾಗಿ ಬೇಡಿಕೊಂಡರೂ ಕೇಳುವವರು ಯಾರೂ ಇಲ್ಲ, ವಿವಾದ ಹಾಗೇ ತಣ್ಣಗಾಗುತ್ತದೆ ಬಿಡಿ, ಎಂದು ನಗುತ್ತಿದೆ ಗಾಂಧಿನಗರ ಎಂಬುದು ಲೇಟೇಸ್ಟ್ ನ್ಯೂಸ್. (ಒನ್ ಇಂಡಿಯಾ ಕನ್ನಡ)

  English summary
  Kannada Movie Pari Created Controversy. This movie releases tomorrow, on 27th April 2012. There probelm is, Kannada movies are competiting each other. They want justice for this.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X