»   »  ಅಮೃತ ಮಹೋತ್ಸವಕ್ಕೆ ರಜನಿ ಮತ್ತು ಕಮಲ್!

ಅಮೃತ ಮಹೋತ್ಸವಕ್ಕೆ ರಜನಿ ಮತ್ತು ಕಮಲ್!

Subscribe to Filmibeat Kannada
Rajinikanth, Kamal in Amrutha Mahotsava
ತಮಿಳು ಚಿತ್ರರಂಗದ ಜನಪ್ರಿಯ ನಟರಾದ ರಜನಿಕಾಂತ್ ಮತ್ತು ಕಮಲ ಹಾಸನ್ ಅಮೃತ ಮಹೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಮಾರ್ಚ್ 1 ರಿಂದ 3 ರವರೆಗೆ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ 50 ಮಂದಿ ಕಲಾವಿದರ ಜತೆಗೆ ರಜನಿಕಾಂತ್ ಮತ್ತು ಕಮಲ ಹಾಸನ್ ರನ್ನು ಸನ್ಮಾನಿಸಲಾಗುತ್ತದೆ .

ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಪರಭಾಷಾ ತಾರೆಯರು, ಪರಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡಿಗರು ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಾರ್ಚ್ 1ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಂದು ಹಲವು ಸಚಿವರು, ಕನ್ನಡ ಚಿತ್ರರಂಗದ ದಿಗ್ಗಜರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ನಂತರ ಕನಸುಗಾರ ರವಿಚಂದ್ರನ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ.

ಮಾರ್ಚ್ 2ರಂದು ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿರುವ 108 ಗಣ್ಯರಿಗೆ ಸನ್ಮಾನ ನಡೆಯಲಿದೆ. ಪಾರ್ವತಮ್ಮ ರಾಜ್ ಕುಮಾರ್, ಡಾ.ಬಿ.ಸರೋಜಾದೇವಿ, ಜಯಂತಿ, ಕೆ.ಎಸ್.ಅಶ್ವಥ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಒಳಗೊಂಡಂತೆ ಮುಂತಾದವರನ್ನು ಅಂದು ಸನ್ಮಾನಿಸಲಾಗುತ್ತದೆ.

'ಕನ್ನಡ ಚಿತ್ರಗಳು: ಸೋಲು, ಗೆಲುವು ಮತ್ತು ಸವಾಲು' ಎಂಬ ವಿಚಾರಗೋಷ್ಠಿಗೆ ಸಂಸದ ಅನಂತಕುಮಾರ್ ಮಾರ್ಚ್ 3 ರಂದು ಚಾಲನೆ ನೀಡಲಿದ್ದಾರೆ. ಕನ್ನ್ನಡ ಚಿತ್ರಗಳ ಗುಣಮಟ್ಟ ಕುರಿತು ಗಂಗಾಧರ ಮೊದಲಿಯಾರ್, ಚಿತ್ರ ನಿರ್ಮಾಣದ ಸಮಸ್ಯೆ ಬಗ್ಗೆ ನಟ ದ್ವ್ವಾರಕೀಶ್, ಕನ್ನಡ ಚಿತ್ರರಂಗದ ಮಾರುಕಟ್ಟೆ ಬಗ್ಗೆ ರಾಜೇಂದ್ರ ಸಿಂಗ್ ಬಾಬು, ಚಿತ್ರರಂಗ ಮತ್ತು ಮಾಧ್ಯಮ ಕುರಿತು ಎಸ್.ಎ.ಚಿನ್ನೇಗೌಡ, ಪೈರಸಿ ಬಗ್ಗೆ ಸಾ.ರಾ.ಗೋವಿಂದು ಮಾರ್ಚ್ 3ರಂದು ವಿಷಯ ಮಂಡಿಸುವರು.

ಚಿತ್ರರಂಗಕ್ಕೆ ಸಹಾಯ ಹಸ್ತ ನೀಡುತ್ತಾ ಬಂದಿರುವ ಇತರೆ ಕ್ಷೇತ್ರದ ಗಣ್ಯರನ್ನು ಮಾರ್ಚ್ 3ರಂದು ಸನ್ಮಾನಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವೈಭವಯುತ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ರಾಜ್ ಪುಣ್ಯಭೂಮಿಯಲ್ಲಿ ಅಮೃತ ಮಹೋತ್ಸವ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ
ಅಮೃತ ಕಲಶಕ್ಕೆ ಭಾರತ ಬಿಂದುಗಳು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada