»   »  ರಾಧಿಕಾ ಪಂಡಿತ್ ರನ್ನು ಮೆಚ್ಚಿದ ಸಾಹಸ ಸಿಂಹ!

ರಾಧಿಕಾ ಪಂಡಿತ್ ರನ್ನು ಮೆಚ್ಚಿದ ಸಾಹಸ ಸಿಂಹ!

Subscribe to Filmibeat Kannada

'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಎಂಟ್ರಿ ಕೊಟ್ಟ ರಾಧಿಕಾ ಪಂಡಿತ್ ಬಹಳ ಸಂತೋಷವಾಗಿದ್ದಾರೆ. ನಾಗತಿಹಳ್ಳಿ ಮೇಷ್ಟ್ರ 'ಒಲವೇ ಜೀವನ ಲೆಕ್ಕಾಚಾರ'ದಲ್ಲಿ ಈಕೆಯ ಅಭಿನಯದ ಬಗ್ಗೆ ಬಹಳ ಪ್ರಶಂಸೆ ವ್ಯಕ್ತವಾಗಿತ್ತು. ಅಲ್ಲದೆ ಚಿತ್ರ ನೋಡಿದ ಚಿತ್ರರಂಗದ ಗಣ್ಯರು ಈಕೆಯ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇವರ ಮುಂದಿನ ಚಿತ್ರ 'ಲವ್ ಗುರು' ಚಿತ್ರದಲ್ಲಿನ ಹಾಡುಗಳು ಕೂಡ ಬಹಳ ಚೆನ್ನಾಗಿ ಮೂಡಿ ಬಂದಿರುವುದು ಈ ಎಲ್ಲಾ ಕಾರಣಗಳಿಂದ ಈಕೆ ಈಗ ಫುಲ್ ಖುಷ್ .

ಚಲನಚಿತ್ರದ ಗಣ್ಯರಿಗಾಗಿ ನಾಗತಿಹಳ್ಳಿ ಆಯೋಜಿಸಿದ್ದ ಪ್ರೀಮಿಯರ್ ಶೋ ನಲ್ಲಿ ಭಾಗವಹಿಸದ್ದವರೆಲ್ಲರೂ ಈಕೆಯನ್ನು ಅಭಿನಂದಿಸಿದ್ದಾರಂತೆ. ಭಾವನಾತ್ಮಕ ಸನ್ನಿವೇಶದಲ್ಲಂತೂ ತುಂಬಾ ಚೆನ್ನಾಗಿ ನಟಿಸಿದ್ದೀಯಾಂತ ಹೊಗಳಿದ್ದಾರೆಂದು ರಾಧಿಕಾ ಹೇಳುತ್ತಾರೆ. ಇದಕ್ಕಿಂತಲೂ ಖುಷಿಯ ಸಂಗತಿ ಏನೆಂದರೆ ಸಾಹಸ ಸಿಂಹ ವಿಷ್ಣುವರ್ಧನ್ ದೂರವಾಣಿ ಮೂಲಕ ಮಾತನಾಡಿ ಈಕೆಯನ್ನು ಅಭಿನಂಧಿಸಿದ್ದಾರೆನ್ನುವುದು.

ಕಥೆ ಮತ್ತು ಚಿತ್ರಕಥೆ ಚೆನ್ನಾಗಿರುವುದರಿಂದ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತೆ ಎಂದು ನನಗೆ ಮೊದಲೇ ತಿಳಿದಿತ್ತು. ಆದರೆ ಚಿತ್ರದಲ್ಲಿ ನಾಗತಿಹಳ್ಳಿ ಸರ್ ನೀಡಿದ ರೋಲ್ ಗೆ ನಾನು ನ್ಯಾಯ ಒದಗಿಸಬಲ್ಲೆನೇ ಎನ್ನುವ ಭಯ ನನ್ನಲ್ಲಿತ್ತು. ನನ್ನ ಮುಂದಿನ ಚಿತ್ರ 'ಲವ್ ಗುರು' ನಲ್ಲಿ ನನ್ನನ್ನು ಬೇರೆ ರೀತಿಯ ಪಾತ್ರದಲ್ಲಿ ನೋಡುತ್ತೀರಾ. ಈ ಚಿತ್ರ ಕೂಡಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನುತ್ತಾರೆ ರಾಧಿಕಾ ಪಂಡಿತ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada