Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲಂಡನ್ ನರ್ತಕಿಯರ ಜೊತೆ ಯೋಗೀಶ್ ಹೆಜ್ಜೆ
ಅರಸುಅಂತಾರೆ ರಚಿಸಿರುವ 'ಸುನಿಯೋರೇ ಸಮ್‌ಜೋರೇ ಈ ಲೂಸು ಹೀರೊ ಈ ಪಾಗಲ್ ದುನಿಯಾಗೆ ನೀ ಗೋಲಿಮಾರೊ...' ಎಂಬ ಗೀತೆಗೆ ನಾಯಕ ಯೋಗೀಶ್ ಲಂಡನ್ ನರ್ತಕಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ. ಶ್ಯಾಮಿ ಅಸೋಸೆಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ಅವರು ನಿರ್ಮಿಸುತ್ತಿರುವ 'ಯಕ್ಷ' ಚಿತ್ರದ ಹಾಡೊಂದು ನಗರದ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿತು.
ಬಾಂಬೆ ಹಾಗೂ ಕರ್ನಾಟಕದ ನೃತ್ಯಗಾರರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಇಮ್ರಾನ್ ನೃತ್ಯ ಸಂಯೋಜಿಸಿದ ಈ ಗೀತೆಗೆ ಅಪಾರ ವೆಚ್ಚದಲ್ಲಿ ಅದ್ದೂರಿ ಸೆಟ್ ನಿರ್ಮಿಸಲಾಗಿತ್ತು. ಗ್ರಾಫಿಕ್ಸ್ ಬಳಸಿ ಈ ಗೀತೆಯನ್ನು ಚಿತ್ರೀಕರಿಸಿಕೊಂಡಿರುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ರಮೇಶ್‌ಭಾಗವತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅನುಪ್‌ಸೀಳಿನ್ ಸಂಗೀತವಿದೆ. ಚಂದ್ರಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಕಲೈ, ಇಮ್ರಾನ್, ಹರ್ಷ ನೃತ್ಯ, ರವಿವರ್ಮ, ಮಾಸ್‌ಮಾದ ಸಾಹಸ, ಮಂಜುಮಾಂಡವ್ಯ ಸಂಭಾಷಣೆ ಮತ್ತು ಮಧುಗಿರಿಪ್ರಕಾಶ್ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯೋಗೀಶ್, ರೂಬಿ, ನಾನಾಪಾಟೇಕರ್, ಅತುಲ್‌ಕುಲಕರ್ಣಿ, ಕೋಮಲ್, ಮಾಸ್ಟರ್ ಹಿರಣ್ಣಯ್ಯ, ಮಹೇಶ್, ಗಿರೀಶ್‌ಮಟ್ಟಣ್ಣನವರ್, ಶರಣ್, ಅಂಬುಜಾಕ್ಷಿ ಮುಂತಾದವರಿದ್ದಾರೆ.