»   » ಅಮೆರಿಕಾದಲ್ಲಿ 'ಮಾತಾಡ್ ಮಾತಾಡು ಮಲ್ಲಿಗೆ' ಮಾತಾಡಲಿದೆ

ಅಮೆರಿಕಾದಲ್ಲಿ 'ಮಾತಾಡ್ ಮಾತಾಡು ಮಲ್ಲಿಗೆ' ಮಾತಾಡಲಿದೆ

Posted By: Super
Subscribe to Filmibeat Kannada
Film Matad Matadu Mallige
ಬಣ್ಣದ ಸೌರಭ ಸೂಸುವ ಹೂವು ಬೆಳೆವ ಹೂವಿನಂಥ ರೈತನ ಹೃದಯಕ್ಕೆ, ಜಾಗತೀಕರಣ ಮುಳ್ಳಾಗುವ ಕತೆಯನ್ನು ಹೊಂದಿದೆ 'ಮಾತಾಡ್ ಮಾತಾಡು ಮಲ್ಲಿಗೆ'. ಈ ಚಿತ್ರ ಕರ್ನಾಟಕದಲ್ಲಿ ಹೊಸ ಚರ್ಚೆಗೆ, ಹೊಸ ಜಾಗೃತಿಗೆ ದಾರಿ ಮಾಡಿದೆ. ರೈತರ ಚರ್ಮ ಸುಲಿಯುವ ತಮ್ಮ ಹುನ್ನಾರಗಳು ಬಯಲಿಗೆ ಬಂದದ್ದು ಕಂಡು ರಾಜಕಾರಣಿಗಳು ಬೆಚ್ಚಿ ಬಿದ್ದಿದ್ದಾರೆ. ಸಮಾಜದ ಬದಲಾವಣೆ ಬೇಕಿಲ್ಲ ಜನರನ್ನು ಈ ಕುರಿತು ಚಿಂತನೆಗೆ ಹಚ್ಚಿದರೂ ಸಾಕು ಎಂಬ ಉದ್ದೇಶದಿಂದ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರ ನಿರ್ದೇಶಿಸಿದ್ದಾರೆ, ಜನರೂ ಒಪ್ಪಿಕೊಂಡಿದ್ದಾರೆ.

ಬಹುರಾಷ್ಟ್ರೀಯ ಕಂಪನಿಗಳ ಕಬಂಧ ಬಾಹುಗಳಲ್ಲಿ ಭಾರತದ ರೈತರ ಪಾಡೇನು ಎಂಬುದನ್ನು ವಿವರಿಸುವ 'ಮಾಮಾಮ' ಚಿತ್ರದಲ್ಲಿ ಘಮ್ಮೆನ್ನುವ ಹಾಡುಗಳಿವೆ. ಹೃದಯ ತಟ್ಟುವ ಭಾವನಾತ್ಮಕ ಸನ್ನಿವೇಶಗಳಿವೆ. ದೇಶಭಕ್ತರೆಲ್ಲರೂ ಕೂತು ಯೋಚಿಸಬೇಕಾದ ವಿಚಾರಗಳಿವೆ. ರಕ್ತಕ್ಕೆ ರಕ್ತ ಎನ್ನುವ ನಕ್ಸಲ್ ವಾದವಿದೆ. ಭ್ರಷ್ಟ ರಾಜಕಾರಣಿಗಳ ಮುಖವಾಡ ಕಳಚಿ ಬೀಳಿಸುವಂಥ ಸನ್ನಿವೇಶಗಳಿವೆ. ಕಚಗುಳಿಯಿಡುವ ಪಾತ್ರಗಳಿವೆ.

ಇಷ್ಟೆಲ್ಲ ಇರುವ ಒಂದು ಸುಂದರ, ಸಾಮಾಜಿಕ ಮತ್ತು ಜನಜಾಗೃತಿಯ ಚಿತ್ರವನ್ನು ಅಮೆರಿಕನ್ನಡಿಗರು ನೋಡದಿದ್ದರೆ ಹೇಗೆ? ಮಾತಾಡ್ ಮಾತಾಡು ಮಲ್ಲಿಗೆ ಚಿತ್ರವನ್ನು ಅಮೆರಿಕಾದ ಎಲ್ಲ ಪ್ರದೇಶಗಳಲ್ಲಿಯೂ ಬಿಡುಗಡೆ ಮಾಡುವ ಇರಾದೆ ಹೊಂದಿದ್ದಾರೆ ನ್ಯೂಯಾರ್ಕ್ ನಿವಾಸಿ ಪುರುಷೋತ್ತಮ್ ಚಿಕ್ಕತ್ತೂರ್.

ವಿಷ್ಣುವರ್ಧನ್ ಮತ್ತು ಸುಹಾಸಿನಿ ಸೇರಿದಂತೆ ಕನ್ನಡದ ಹೆಚ್ಚಿನ ಪ್ರತಿಭಾನ್ವಿತ ನಟನಟಿಯರ ಮೇರು ಅಭಿನಯವನ್ನು ಆಸ್ವಾದಿಸಲಿಚ್ಛಿಸುವ ಚಿತ್ರಪ್ರೇಮಿಗಳು, ಸಂಘಸಂಸ್ಥೆಗಳು ಪುರುಷೋತ್ತಮ್ ಅವರನ್ನು ಸಂಪರ್ಕಿಸಬಹುದು.

ಚಿತ್ರ ಪ್ರದರ್ಶನಕ್ಕಾಗಿ ಅಥವ ಹೆಚ್ಚಿನ ವಿವರಗಳಿಗಾಗಿ ಪುರುಷೋತ್ತಮ್ ಅಥವ ಮೋಹನ್ ಅವರನ್ನು ಸಂಪರ್ಕಿಸಬಹುದು.

ಪುರುಷೋತ್ತಮ್ ಚಿಕ್ಕತ್ತೂರ್ : indirap@juno.com (718)845-6794) ಅಥವ

ನಂದಾವರ್ ಕೆ. ಮೋಹನ್ : Nandavar_mohan@kannadadvd.net, (732) 617-0153

ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರವಿಮರ್ಶೆ
ಅವಿರತ ತಂಡ ಏರ್ಪಡಿಸಿದ್ದ ಪ್ರದರ್ಶನದಲ್ಲಿ ತಾರಾಸಂಗಮ

English summary
Matad Matadu Mallige to be screened in America

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada