»   » ತಾಯ್ತನದ ಖುಷಿಯಲ್ಲಿ ಬೆಂಗಳೂರು ಬೆಡಗಿ ಸಿಂಧು ಮೆನನ್

ತಾಯ್ತನದ ಖುಷಿಯಲ್ಲಿ ಬೆಂಗಳೂರು ಬೆಡಗಿ ಸಿಂಧು ಮೆನನ್

Posted By:
Subscribe to Filmibeat Kannada

'ರಶ್ಮಿ' (1994)ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಸಿಂಧು ಮೆನನ್ ಈಗ ಮುದ್ದಾದ ಹೆಣ್ಣುಮಗುವಿಗೆ ತಾಯಿಯಾಗಿದ್ದಾರೆ. ಇಸವಿ 2010ರಲ್ಲಿ ಬ್ರಿಟನ್ ಉದ್ಯಮಿ ಪ್ರಭು ಅವರ ಕೈಹಿಡಿದಿದ್ದರು ಸಿಂಧು. ಮಲಯಾಳಂ ಮೂಲದ ಈ ಬೆಡಗಿ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಹಾಗಾಗಿ ಈಕೆಗೆ ಕನ್ನಡ ಸುಲಿದ ಬಾಳೆಹಣ್ಣಿನಂತೆ.

ಪ್ರಭು ಅವರನ್ನು ವರಿಸಿದ ಬಳಿಕ ಸಿಂಧು ಬ್ರಿಟನ್‌‍ಗೆ ಹಾರಿದ್ದರು. ಅಲ್ಲಿಯೇ ಪತಿಯೊಂದಿಗೆ ಸಂಸಾರ ತೂಗುತ್ತಿದ್ದರು. ಈಗ ಬ್ರಿಟನ್‌ನಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಭರತನಾಟ್ಯ ಪ್ರವೀಣೆಯಾಗಿದ್ದ ಸಿಂಧು ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಕೆ ವಿ ಜಯರಾಮ್. 'ಪ್ರೇಮ ಪ್ರೇಮ ಪ್ರೇಮ' (1999)ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಸಿಂಧು ಚಿತ್ರರಂಗಕ್ಕೆ ಪರಿಚಯವಾಗಿದ್ದರು.

ಬಳಿಕ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಸಿಂಧು ಮಿಂಚತೊಡಗಿದರು. ಸುದೀಪ್ ಅಭಿನಯದ 'ನಂದಿ' ಚಿತ್ರದ ಮೂಲಕ ಮತ್ತೆ ಸಿಂಧು ಕನ್ನಡಕ್ಕೆ ಆಗಮಿಸಿದರು. ಯಾರೇ ನೀ ಹುಡುಗಿ, ಜೇಷ್ಠ, ಧರ್ಮ, ಖುಷಿ ಮುಂತಾದ ಕನ್ನಡ ಚಿತ್ರಗಳಲ್ಲಿ ಸಿಂಧು ಅಭಿನಯಿಸಿದರೂ ಆಕೆಯ ವೃತ್ತಿಜೀವನ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ಅದು ಏನೇ ಇರಲಿ ಸಿಂಧು ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸೋಣ.

English summary
South Indian actress Sindhu Menon Delivered a Baby Girl in UK! It is said that both the mother and the baby are doing fine.Sindhu has entered to Kannada films as child artist from film Rashmi (1994). Sindhu is married to UK-based businessman Prabhu on 2010. A heartiest congratulation to Sindhu Menon and her family!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada