»   » ಯಶಸ್ಸಿನ ಅಲೆಯಲ್ಲಿ ಬೆಂಗಳೂರು ಬೆಡಗಿ ಶಿರಿನ್

ಯಶಸ್ಸಿನ ಅಲೆಯಲ್ಲಿ ಬೆಂಗಳೂರು ಬೆಡಗಿ ಶಿರಿನ್

Posted By:
Subscribe to Filmibeat Kannada

ಅಪ್ಪಟ ಕನ್ನಡದ ಹುಡುಗಿಯೊಬ್ಬಳು ಕೊನೆಗೂ ಸಕ್ಸಸ್ ಕಂಡಿದ್ದಾಳೆ. ಹೌದು ಸ್ಯಾಂಡಲ್‌ವುಡ್‌ನ ಐರನ್ ಲೆಗ್ ಎಂಬ ಹಣೆಪಟ್ಟಿ ಹೊತ್ತ ನಾಯಕಿ ಶಿರಿನ್ 'ಎಕೆ 56'ರ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾಳೆ. ಮೂಲತಃ ಬೆಂಗಳೂರಿನ ಶಿರಿನ್ ಮಾಡೆಲಿಂಗ್ ಕ್ಷೇತ್ರದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು.

ದರ್ಶನ್ ಜೊತೆ 'ಧ್ರುವ' ಚಿತ್ರದಲ್ಲಿ ಮೊದಲು ನಟಿಸುವ ಅವಕಾಶ ಸಿಕ್ಕಿತಾದರೂ ಚಿತ್ರ ನೆಲಕಚ್ಚಿತು. ನಂತರ ಅವಕಾಶ ಕೊರತೆಯಿಂದಾಗಿ ತಮಿಳು, ತೆಲಗು ಉದ್ಯಮದ ಬಾಗಿಲು ಬಡಿದು 8,9 ಚಿತ್ರಗಳಲ್ಲಿ ನಟಿಸಿದರೂ ಉಪಯೋಗವಾಗಲಿಲ್ಲ. ಪುನಃ ದರ್ಶನ್ ಜೊತೆಯಾಗಿ 'ಭೂಪತಿ' ಚಿತ್ರದಲ್ಲಿ ನಟಿಸಿರು. ಗೆಲವು ಮಾತ್ರ ಮರೀಚಿಕೆಯಾಯಿತು. ನಂತರ ಸಿಹಿಗಾಳಿ, ಯೋಗಿ ಹೀಗೆ ಚಿತ್ರಗಳ ಸಂಖ್ಯೆ ಬೆಳೆಯಿತೇ ಹೊರತು ಸಕ್ಸ್‌ಸ್ ಸಿಕ್ಕಲಿಲ್ಲ.

ಈಕೆಯನ್ನು ತಮ್ಮ 25ನೇ ನಿರ್ದೇಶನದ ಚಿತ್ರಕ್ಕೆ ಓಂ ಪ್ರಕಾಶ್‌ರಾವ್ ಆಯ್ಕೆ ಮಾಡಿದರು. ನಾಯಕ ಸಿದ್ಧಾಂತ್ ಜೊತೆ ಗ್ಲಾಮರಸ್‌ ಆಗಿ ಹೆಜ್ಜೆಹಾಕಿದ ಎಕೆ 56 ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚೊಚ್ಚಲ ಚಿತ್ರದಲ್ಲಿಯೇ ನಾಯಕ ಸಿದ್ಧಾಂತ್ ಗೆದ್ದಿದ್ದಾರೆ. ಹಲವಾರು ವರ್ಷಗಳಿಂದ ಯಶಸ್ಸಿಗಾಗಿ ಹುಡುಕಾಡುತ್ತಿದ್ದ ಶಿರಿನ್ ಸಹ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Mass director Om Prakash Rao's latest Kannada action movie AK 56 doing well at box-office. The movie also gives a big break for a model turned actress, Bangalore beauty Sherin or Shirin, who appears in Telugu and Tamil films.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X