»   » ಗಮನಿಸಿ 'ಗಾಳಿಪಟ' ಭಾವನಾ ಹೆಸರು ಬದಲಾಗಿದೆ

ಗಮನಿಸಿ 'ಗಾಳಿಪಟ' ಭಾವನಾ ಹೆಸರು ಬದಲಾಗಿದೆ

Posted By:
Subscribe to Filmibeat Kannada

ಯೋಗರಾಜ್ ಭಟ್ ಅವರ 'ಗಾಳಿಪಟ' ಚಿತ್ರದ ಬಳಿಕ ಗಾಂಧಿನಗರದಿಂದ ಬಹುತೇಕ ಮಾಯವಾಗಿದ್ದ ಭಾವನಾ ರಾವ್ ಈಗ ಹೊಸ ಭಾವನೆಗಳೊಂದಿಗೆ ಮರಳಿದ್ದಾರೆ. ತಮ್ಮ ಹೆಸರನ್ನು ಶಿಖಾ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ. ಈ ಬದಲಾವಣೆಗೆ ಕವಡೆ ಶಾಸ್ತ್ರ, ಗಿಳಿಶಾಸ್ತ್ರ ಕಾರಣವೋ ಏನೋ ಗೊತ್ತಿಲ್ಲ.

'ಗಾಳಿಪಟ' ಚಿತ್ರದಲ್ಲಿ ಚೆಲ್ಲುಚೆಲ್ಲಾಗಿ ಅಭಿನಯಿಸಿ ಗಮನಸೆಳೆದಿದ್ದ ಭಾವನಾ ಬಳಿಕ ತೆಲುಗು, ತಮಿಳು ಚಿತ್ರರಂಗದ ಬಾಗಿಲು ತಟ್ಟಿ ಬಂದಿದ್ದರು. ಎಲ್ಲೂ ಅದೃಷ್ಟ ದೇವತೆ ಕೈಹಿಡಿಯದ ಕಾರಣ ಕಡೆಗೆ ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿದ್ದಾರಂತೆ. ಇತ್ತೀಚೆಗೆ ತೆರೆಕಂಡ ತಮಿಳಿನ 'ವಿನ್‌ಮೀಂಗಳ್' ಚಿತ್ರ ಉತ್ತಮ ವಿಮರ್ಶೆಗೆ ಪಾತ್ರವಾಗಿದೆ.

ಕನ್ನಡದ ಮಾಯದಂಥ ಮಳೆ, ವಾರೆ ವ್ಹಾ ಎಂಬ ಚಿತ್ರಗಳಲ್ಲಿ ಅಭಿನಯಿಸಿದರಾದರೂ ಬಳಿಕ ಅವಕಾಶಗಳು ಸಿಗಲಿಲ್ಲ. ಭರತನಾಟ್ಯ ಕಲಾವಿದೆಯೂ ಆಗಿರುವ ಭಾವನಾ ರಾವ್ ಈಗ ನೆರೆಯ ತಮಿಳಿನಲ್ಲಿ ಒಂದೊಂದೇ ಖಾತೆ ತೆರೆಯುತ್ತಿದ್ದಾರೆ. ಹೆಸರು ಬದಲಾದ ಮೇಲೆ ಅವರ ಲಕ್ಕೂ ಬದಲಾಗುತ್ತದಾ? ದೇವರಾಣೆಗೂ ಗೊತ್ತಿಲ್ಲ. (ಒನ್‌ಇಂಡಿಯಾ ಕನ್ನಡ)

English summary
Kannada actress Bhavana Rao has changed her name as Shikha. Her recent Tamil film Vinmeengal got rave reviews for her standout performance. The actress is trying her luck in Tamil and Telugu now, with a new name Shikha.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X