»   »  'ಅರವಿಂದ'ನ ನಾಯಕಿಯಾಗಿ ಧಾರವಾಡದ ಐಶ್ವರ್ಯ!

'ಅರವಿಂದ'ನ ನಾಯಕಿಯಾಗಿ ಧಾರವಾಡದ ಐಶ್ವರ್ಯ!

Posted By:
Subscribe to Filmibeat Kannada

ಬೆನಕ ಮೂವೀಸ್ ನಿರ್ಮಾಣದ 'ಅರವಿಂದ' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಆಗಸ್ಟ್ ಮೊದಲವಾರದಲ್ಲಿ ಆರಂಭವಾಗಲಿದೆ. ಚಿತ್ರದ ಗೀತೆಗಳು ಕುಲು ಮನಾಲಿ ಹಾಗೂ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳಲಿದೆ ಎಂದು ನಿರ್ಮಾಪಕ ರವಿಕುಮಾರ್ ತಿಳಿಸಿದ್ದಾರೆ.

ಚಿತ್ರದಲ್ಲಿ ನಟಿಸುವ ಕಲಾವಿದರು ಕನ್ನಡದವರೇ ಆಗಿರಬೇಕು ಎಂಬ ಅಭಿಲಾಷೆ ಹೊತ್ತ ನಿರ್ಮಾಪಕರು ಅಭಿನಯ ತರಂಗದಿಂದ ತರಬೇತಿ ಪಡೆದಿರುವ ಅರವಿಂದ ರಾಜ್ ಎಂಬ ಹುಡುಗನನ್ನು ಚಿತ್ರದ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಧಾರವಾಡದ ಹುಡುಗಿ ಐಶ್ವರ್ಯಳನ್ನು ಚಿತ್ರದ ನಾಯಕಿಯನಾಗಿ ಮಾಡಿದ್ದಾರೆ ಹಾಗೂ ಅಭಿನಯ ತರಂಗದಿಂದ ಅನುಭವ ಪಡೆದಿರುವ ಸಾಕಷ್ಟು ಹುಡುಗರು ಚಿತ್ರದಲ್ಲಿ ಸಹಕಲಾವಿದರಾಗಿ ಅಭಿನಯಿಸಿದ್ದಾರೆ.

'ಕಲರವ' ಚಿತ್ರದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ತಿಮ್ಮರಾಜು 'ಅರವಿಂದ' ಚಿತ್ರದ ನಿರ್ದೇಶಕರು. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದಿದ್ದಾರೆ. ರಮೇಶ್ ಆಲ್‌ಬೈ ಛಾಯಾಗ್ರಹಣ, ಶ್ರೀನಿವಾಸ ಬಾಬು ಸಂಕಲನ, ಅಶೋಕ್-ಪ್ರಭಾ ಸಂಗೀತ, ಹ್ಯಾರಿಸ್ ಜಾನಿ ಸಾಹಸ, ಶ್ರೀನಿವಾಸ್-ಜೋಗಿ ನಾಗೇಶ್ ನೃತ್ಯ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿದೆ.

ಈ ಸಂತೋಷ್‌ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಅರವಿಂದ್ ರಾಜ, ಐಶ್ವರ್ಯ, ಸಂಜನಾ, ಪ್ರಮಿಳಾ ಸುಬ್ರಹ್ಮಣ್ಯ, ಮಿಲ್ಟ್ರಿ ಮಂಜು, ಮುತ್ತುರಾಜ್, ಅರುಣ್, ಮಣಿ ಹಾಗೂ ಅಭಿನಯ ತರಂಗದ ಅನುಭವಿಗಳು 'ಅರವಿಂದ' ಚಿತ್ರದಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada