For Quick Alerts
  ALLOW NOTIFICATIONS  
  For Daily Alerts

  ಅರುಂಧತಿಯಾಗಿ ದುನಿಯಾ ರಶ್ಮಿ ಎರಡನೇ ಇನ್ನಿಂಗ್ಸ್

  By Rajendra
  |

  ಪೂಜಾಗಾಂಧಿ ಜೊತೆ 'ಅನು' ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ನಾಪತ್ತೆಯಾಗಿದ್ದ ದುನಿಯಾ ರಶ್ಮಿ ಈಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಅವರು 'ಅರುಂಧತಿ'ಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಮೂಲಕ ದುನಿಯಾ ರಶ್ಮಿ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ.

  ದುನಿಯಾ ರಶ್ಮಿ ದುರಂತವೋ ಏನೋ ಆಕೆ ಅಭಿನಯಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲೂ ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ. ಏತನ್ಮಧ್ಯೆ ಮಲಯಾಳಂನ ಒಂದು ಚಿತ್ರದಲ್ಲೂ ಕಾಣಿಸಿಕೊಂಡು ಅಷ್ಟೇ ಶೀಘ್ರವಾಗಿ ನಿರ್ಗಮಿಸಿದ್ದರು. ಈಗವರು ಮತ್ತೊಮ್ಮೆ 'ಅರುಂಧತಿ' ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

  ಆದರೆ ತೆಲುಗು 'ಅರುಂಧತಿ' ಚಿತ್ರಕ್ಕೂ ಕನ್ನಡದ ಚಿತ್ರಕ್ಕೂ ಸುತಾರಾಂ ಸಂಬಂಧವಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ಬಿಆರ್ ಕೇಶವ. ಇದೊಂದು ಮರ್ಡರ್ ಮಿಸ್ಟರಿ ಚಿತ್ರ. ಚಿತ್ರದ ನಾಯಕಿ ಕನಸಿನಲ್ಲಿ ಕಂಡ ಕೊಲೆಗಳು ಮಾರನೇ ದಿನ ನನಸಾಗುತ್ತಿರುತ್ತವೆ. ಮುಂದೇನಾಗುತ್ತದೆ ಎಂಬ ಕುತೂಹಲ ಘಟ್ಟದಲ್ಲಿ ಕತೆ ಸಾಗುತ್ತದೆ. ಚಿತ್ರದ ನಾಯಕ ನಟ ಮಹೇಶ್ ಗಾಂಧಿ. (ಏಜೆನ್ಸೀಸ್)

  English summary
  After long gap Duniya Rashmi back to Kannada films. She plays a prominent role in a Kannada film Arundhathi directing by BR Keshava. It is a murder mystery film revolves around split personality Arundhathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X