»   » ನಾನು ಕನ್ನಡ ಚಿತ್ರರಂಗದ ಅಭಿಮಾನಿ - ಎಚ್ಡಿಕೆ

ನಾನು ಕನ್ನಡ ಚಿತ್ರರಂಗದ ಅಭಿಮಾನಿ - ಎಚ್ಡಿಕೆ

Posted By:
Subscribe to Filmibeat Kannada
H D Kumaraswamy
ನಮ್ಮ ಚಿತ್ರರಂಗ ಇಂದು ಸಂಖ್ಯೆಯಲ್ಲಿ ಬೇರೆ ಭಾಷೆಯನ್ನೂ ಮೀರಿಸುತ್ತಿದೆ. ಇನ್ನೊಂದಿಷ್ಟು ಗುಣಾತ್ಮಕ ಚಿತ್ರಗಳು ಬಂದರೆ ನಾವು ಬೇರೆ ಭಾಷೆಗೆ ಹೆದರುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಆರಕ್ಷಕ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೇಳಿಕೆ ನೀಡಿದರು.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚಿತ್ರರಂಗಕ್ಕೆ ಹೊಸಬರೇನಲ್ಲ. ವಿತರಕರು, ನಿರ್ಮಾಪಕರು ಮತ್ತು ಚಿತ್ರಮಂದಿರದ ಮಾಲೀಕರಾದ ಎಚ್ಡಿಕೆ, ಚಿತ್ರರಂಗದಲ್ಲಿನ ತನ್ನ ಮಿತ್ರರು, ಸಹದ್ಯೋಗಿಗಳಿಂದ ಸಿನಿಮಾಕೆ ಸಂಬಂಧಪಟ್ಟ ವಿಷಯಗಳನ್ನು ತಿಳಿದುಕೊಳ್ಳುತ್ತಿರುತ್ತಾರೆ.

ಸದ್ಯ ರಾಜಕೀಯದಲ್ಲಿ ಬ್ಯೂಸಿಯಾಗಿರುವ ನಾನು ಚಿತ್ರರಂಗದಿಂದ ದೂರವಿದ್ದೇನೆ ಅಷ್ಟೇ, ಆದರೂ ಚಿತ್ರರಂಗದಲ್ಲಿನ ನನ್ನ ಸ್ನೇಹಿತರ ಮೂಲಕ ಯಾವಯಾವ ಚಿತ್ರಗಳು ಬಿಡುಗಡೆಗೊಂಡಿವೆ, ಹೇಗೆ ಓಡುತ್ತಿವೆ ಎಂದು ವಿಚಾರಿಸುತ್ತಿರುತ್ತೇನೆ ಎಂದು ಚಿತ್ರರಂಗದ ಮೇಲೆ ತನಗಿರುವ ಅಭಿಮಾನವನ್ನು ತೆರೆದಿಟ್ಟಿದ್ದಾರೆ.

ನಾನು ಮತ್ತು ನಮ್ಮ ಪಕ್ಷದ ಕಾರ್ಯಕರ್ತರಾದ ಸಂದೇಶ್ ನಾಗರಾಜ್ ಚಿತ್ರರಂಗದ ಬಗ್ಗೆ ಮಾತಾನಾಡುತ್ತಿರುತ್ತೇವೆ. ಚಿತ್ರರಂಗದಿಂದ ಸದ್ಯ ದೂರವಿದ್ದರೂ ನನಗೆ ಕನ್ನಡ ಚಿತ್ರಗಳ ಮೇಲೆ ಬಹಳಷ್ಟು ಕಾಳಜಿ ಇದೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

English summary
Former CM and Kannada film producer H D Kumaraswamy said, compare to other languages number of movies releasing in Kannada is high. Quality of the Kannada movies should be improved so that our films also can compete with other language movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada