»   » ನೂರು ಕೋಟಿ ವೆಚ್ಚದಲ್ಲಿ 2ಡಿ ಚಿತ್ರ ಲವಕುಶ

ನೂರು ಕೋಟಿ ವೆಚ್ಚದಲ್ಲಿ 2ಡಿ ಚಿತ್ರ ಲವಕುಶ

Posted By:
Subscribe to Filmibeat Kannada

ಇಂಗ್ಲಿಷ್, ಹಿಂದಿ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಭಾರತದ ಪ್ರಥಮ ಆನಿಮೇಷನ್ ಚಿತ್ರ 'ಲವ ಕುಶ ದಿ ವಾರಿಯರ್ ಟ್ವಿನ್ಸ್' ಬಿಡುಗಡೆಗೆ ಸಿದ್ಧವಾಗಿದೆ. ಈ 2ಡಿ ಆನಿಮೇಷನ್ ಚಿತ್ರವನ್ನು ಹೈದರಾಬಾದಿನ ರಾಯುಡು ವಿಷನ್ ಮೀಡಿಯಾ ಲಿಮಿಟೆಡ್ (ಆರ್ ವಿಎಂಎಲ್) ನಿರ್ಮಿಸಿದೆ.

ಮೇ ತಿಂಗಳಲ್ಲಿ ತೆರೆಕಾಣಲಿರುವ ಈ ಚಿತ್ರವನ್ನು ಧವಳ ಸತ್ಯಂ ಎಂಬುವವರು ನಿರ್ದೇಶಿಸಿದ್ದಾರೆ. ಆನಿಮೇಷನ್ ನಲ್ಲಿ ಮೂಡಿಬಂದಿರುವ ಈ ಅದ್ಭುತ ದೃಶ್ಯಕಾವ್ಯವನ್ನು ಸಂಪೂರ್ಣವಾಗಿ ಆರ್ ವಿ ಎಂಎಲ್ ಲ್ಯಾಬ್ ನಲ್ಲಿ ಸಿದ್ಧಪಡಿಸಿರುವುದು ವಿಶೇಷ. ಒಟ್ಟು 400 ಮಂದಿ ನುರಿತ ಆನಿಮೇಷನ್ ತಜ್ಞರು 'ಲವ ಕುಶ' ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ.

ಸುಮಾರು ರು.100 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನುನಿರ್ಮಿಸಿರುವುದು ಮತ್ತೊಂದು ವಿಶೇಷ. ಎಸ್ ಎಲ್ ವೈದ್ಯನಾಥನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಭಾರತದ ಸಾಂಪ್ರದಾಯಿಕ ಹಾಗೂ ಪಾಶ್ಚಿಮಾತ್ಯ ವಾದ್ಯಗಳನ್ನು ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಕೆ ಜೆ ಯೇಸುದಾಸ್, ಶಂಕರ್ ಮಹದೇವನ್, ಚಿತ್ರಾ ಮತ್ತು ಸಾಧನಾ ಸರಗಂ ಹಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada