For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿಪರದೆಗೆ ಮಾಜಿ ಡಾನ್ ಎಂಪಿ ಜಯರಾಜ್ ಕುಡಿ

  By Rajendra
  |

  1970ರ ದಶಕದಲ್ಲಿ ಬೆಂಗಳೂರು ಭೂಗತ ಜಗತ್ತಿನಲ್ಲಿ ಕೇಳಿಬಂದ ದೊಡ್ಡ ಹೆಸರು ಎಂಪಿ ಜಯರಾಜ್. ಕೋರ್ಟ್ ಆವರಣದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಹತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಜೈಲಿನಿಂದ ಹೊರಬರುವಷ್ಟರಲ್ಲಿ ಬೆಂಗಳೂರು ಅಂಡರ್‌ವರ್ಲ್ಡ್ ಕೊತ್ವಾಲ್ ರಾಮಚಂದ್ರ ಹಾಗೂ ಆಯಿಲ್ ಕುಮಾರ್ ಹಿಡಿತದಲ್ಲಿತ್ತು.

  1989ರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಜಯರಾಜ್ ಮೃತಪಟ್ಟರು. ಅವರ ಜೊತೆ ಅವರ ವಕೀಲರು ಸಾವಪ್ಪಿದ್ದರು. ಇದೆಲ್ಲಾ ಹಳೆಯ ಕತೆ. ಇಷ್ಟೆಲ್ಲಾ ಹೇಳಲು ಕಾರಣ ಈಗವರ ಕುಡಿ ಅಜಿತ್ ಜಯರಾಜ್ ಬೆಳ್ಳಿತೆರೆಗೆ ಅಡಿಯಿಟ್ಟಿದ್ದಾರೆ. 'ಅಗಮ್ಯ' ಎಂಬ ಹಾರರ್ ಚಿತ್ರದಲ್ಲಿ ನಾಯಕ. ಈ ಚಿತ್ರದಲ್ಲಿ ಅಜಿತ್ ಎರಡನೇ ನಾಯಕ ನಟ.

  'ಅಗಮ್ಯ' ಚಿತ್ರವು ಆರು ಮಂದಿ ಕಾಲೇಜು ಯುವಕರ ಕತೆಯನ್ನು ಒಳಗೊಂಡಿದೆ. ಹಾರರ್ ಜೊತೆಗೆ ಒಂದಷ್ಟು ತಮಾಷೆ, ಲವ್ವು, ಫ್ರೆಂಡ್‌ಶಿಫ್, ರೊಮ್ಯಾನ್ಸ್ ಕೂಡ ಇರುತ್ತದೆ. ಉಮೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಒಟ್ಟು 40 ಮಂದಿ ನಿರ್ಮಾಪಕರು. (ಒನ್‌ಇಂಡಿಯಾ ಕನ್ನಡ)

  English summary
  Bangalore underworld former don M. P. Jayaraj son Ajit Jayaraj debuts in Kannada films. The movie titled as Agamya. Basically a Scary/Horror movie...But contains Fun + Love + Friendship + Romance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X