»   »  ಖ್ಯಾತ ನಟ ನಾನಾ ಪಾಟೇಕರ್ ಕನ್ನಡ ಚಿತ್ರರಂಗಕ್ಕೆ

ಖ್ಯಾತ ನಟ ನಾನಾ ಪಾಟೇಕರ್ ಕನ್ನಡ ಚಿತ್ರರಂಗಕ್ಕೆ

Posted By:
Subscribe to Filmibeat Kannada
Nana Patekar to Act in Kannada
ತಮ್ಮದೇ ಶೈಲಿಯ ಅದ್ಭುತ ಸಂಭಾಷಣೆಗೆ ಹೆಸರಾದವರು ನಾನಾ ಪಾಟೇಕರ್. ಹಿಂದಿ ಚಿತ್ರರಂಗ ಕಂಡಂತಹ ಅಪ್ರತಿಮ ನಟ. ದಕ್ಷಿಣ ಭಾರತದ ತಮಿಳು ಚಿತ್ರದಲ್ಲಿ ನಟಿಸಿದ್ದರು.ಆದರೆ ಕನ್ನಡದಲ್ಲಿ ನಟಿಸಿರಲಿಲ್ಲ. ಕನ್ನಡಕ್ಕೆ ಕರೆತರುವ ಸಾಹಸವನ್ನೂ ಯಾರೂ ಮಾಡಿರಲಿಲ್ಲ. ಈಗ ಆ ಸಾಹಸನ್ನು ನಿರ್ಮಾಪಕ ಸುರೇಶ್ ಅರಸ್ ಮಾಡುತ್ತಿದ್ದಾರೆ.

'ಪೆರೋಲ್' ಎಂಬ ಚಿತ್ರವನ್ನು ಸಂಕಲನಕಾರ ಸುರೇಶ್ ಅರಸ್ ನಿರ್ಮಿಸುತ್ತಿದ್ದು ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ. ನಾನಾ ಪಾಟೇಕರ್ ಅವರೊಂದಿಗಿನ ಮೊದಲ ಸುತ್ತಿನ ಮಾತುಕತೆ ಮುಗಿದಿದೆ. ಅವರು ಸಹ ಕನ್ನಡ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ. ಶೀಘ್ರದಲ್ಲೇ ನಾನಾ ಪಾಟೇಕರ್ ಕನ್ನಡ ತೆರೆಯ ಮೇಲೆ ಕಾಣಿಸಲಿದ್ದಾರೆ ಎನ್ನುತ್ತಾರೆ ಸುರೇಶ್ .

ರಾಜಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಂಗೀತವನ್ನು ಇದೇ ಮೊದಲ ಬಾರಿಗೆ ಬಾಲಾಜಿ ಸಂಯೋಜಿಸಲಿದ್ದಾರೆ. ಈ ಹಿಂದೆ ಇವರು ಎ ಆರ್ ರೆಹಮಾನ್ ಬಳಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಎಂಟು ಮಂದಿ ನಾಯಕರು ಹಾಗೂ ಅಷ್ಟೇ ಮಂದಿ ನಾಯಕಿಯರು ಇರುತ್ತಾರೆ ಎನ್ನುತ್ತಾರೆ ಸುರೇಶ್. ತಮಿಳು ಚಿತ್ರ 'ಬೊಮ್ಮಲಾಟ'ದಲ್ಲಿ ಅರ್ಜುನ್ ಸರ್ಜಾರೊಂದಿಗೆ ನಾನಾ ಪಾಟೇಕರ್ ನಟಿಸಿದ್ದರು. ನಂತರ ಅವರು ದಕ್ಷಿಣ ಭಾರತದ ಚಿತ್ರಗಳಿಗೆ ದೂರವಾಗಿದ್ದರು. ಈಗ ಕನ್ನಡ ಚಿತ್ರದ ಮೂಲಕ ಮತ್ತೆ ಹತ್ತಿರವಾರುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada