»   » ತಿರುಮಲ ತಿರುಪತಿಗೆ ಸೂಪರ್ ಸ್ಟಾರ್ ರಜನಿಕಾಂತ್

ತಿರುಮಲ ತಿರುಪತಿಗೆ ಸೂಪರ್ ಸ್ಟಾರ್ ರಜನಿಕಾಂತ್

Posted By:
Subscribe to Filmibeat Kannada

ಸಿಂಗಪುರದಿಂದಹಿಂತಿರುಗಿದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತಮ್ಮ ಮಹತ್ವಾಕಾಂಕ್ಷಿ ಚಿತ್ರ 'ರಾಣಾ' ಚಿತ್ರೀಕರಣಕ್ಕೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಪಡೆಯಲಿದ್ದಾರೆ ರಜನಿ.

ಆಗಸ್ಟ್ 14ರಂದು ತಿರುಪತಿಗೆ ಪ್ರಯಾಣ ಬೆಳೆಸಲಿದ್ದಾರೆ. ಟಾಲಿವುಡ್‌ನ ಹಿರಿಯ ನಟ ಹಾಗೂ ರಜನಿಯ ಆತ್ಮೀಯ ಗೆಳೆಯ ಮೋಹನ್ ಬಾಬು ಈಗಾಗಲೆ ರಜನಿ ಹೆಸರಲ್ಲಿ ವಿವಿಐಪಿ ದರ್ಶನ ಟಿಕೆಟ್ ಬುಕ್ ಮಾಡಿದ್ದಾರೆ. ತಿಮ್ಮಪ್ಪನ ಭೇಟಿಗೆ ರಜನಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇದಕ್ಕೂ ಮುನ್ನ ರಜನಿ ಅವರ ಮಗಳು ಸೌಂದರ್ಯ ಹಾಗೂ ಆಕೆಯ ಗಂಡ ಅಶ್ವಿನ್ ತಿರುಪತಿಗೆ ಭೇಟಿ ನೀಡಿದ್ದರು. ತಂದೆಯ ಆರೋಗ್ಯ ಸುಧಾರಿಸಿದ್ದಕ್ಕಾಗಿ ತಾವು ತಿರುಪತಿಗೆ ಭೇಟಿ ನೀಡಿದ್ದಾಗಿ ಸೌಂದರ್ಯ ತಿಳಿಸಿದ್ದರು. ಇವರ ಟಿಕೆಟ್‌ಗಳನ್ನು ನಟ ಮೋಹನ್ ಬಾಬು ಆಯೋಜಿಸಿದ್ದದ್ದು ವಿಶೇಷ. (ಏಜೆನ್ಸೀಸ್)

English summary
Superstar Rajinikanth will be visiting Lord Venkateshwara Temple in Tirumala Tirupati on August 14, before he resumes the shooting of Rana. A VVIP darshan ticket was booked in Rajinikanth’s name by Tollywood actor Mohan Babu, a close friend of the superstar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada