»   » ತೆಲುಗು ದಮ್ಮುವಿಗೆ 150, ಕನ್ನಡ ಪರಿಗೆ ಸಿಕ್ಕಿದ್ದು 40 ಚಿತ್ರಮಂದಿರ

ತೆಲುಗು ದಮ್ಮುವಿಗೆ 150, ಕನ್ನಡ ಪರಿಗೆ ಸಿಕ್ಕಿದ್ದು 40 ಚಿತ್ರಮಂದಿರ

Posted By:
Subscribe to Filmibeat Kannada
Telugu movie Dammu & Kannada movie Pari
ಜ್ಯೂ. ಎನ್ಟಿಆರ್ ಅಭಿನಯದ 'ದಮ್ಮು' ತೆಲುಗು ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಮೂಲಗಳ ಪ್ರಕಾರ ಈ ಚಿತ್ರ 150 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬೆಂಗಳೂರಿನಲ್ಲಿ ಒಂದೇ 50ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ತೆಲುಗು ಚಿತ್ರವೊಂದು ಪ್ರದರ್ಶನ ಕಾಣಲಿದೆ. ಸುಧೀರ್ ಅತ್ತಾವರ್ ನಿರ್ದೇಶನದ ಕನ್ನಡ ಚಿತ್ರ 'ಪರಿ' ಕಷ್ಟಪಟ್ಟು 40 ಚಿತ್ರಮಂದಿರ ಗಳಿಸಿಕೊಂಡಿದೆ.

ಒಂದೊಂದು ಚಿತ್ರಮಂದಿರಕ್ಕೂ ಭೇಟಿ ನೀಡಿ ಕಷ್ಟಪಟ್ಟು ನಮ್ಮ ಚಿತ್ರ ಪ್ರದರ್ಶಿಸಲು ಒಪ್ಪಿಸಿದ್ದೇವೆ. 75ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ನಮ್ಮ ಚಿತ್ರ ಪ್ರದರ್ಶಿಸ ಬೇಕೆನ್ನುವ ಆಸೆ ಇಟ್ಟುಕೊಂಡಿದ್ದೆ. ಇಷ್ಟಾದರೂ ಚಿತ್ರಮಂದಿರ ಸಿಕ್ಕಿತಲ್ವಾ ಎನ್ನುವ ಅಲ್ಪತೃಪ್ತಿ ಪಟ್ಟು ಕೊಳ್ಳಬೇಕಾಗುತ್ತದೆ. ನಾವು ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೋ ಅಥವಾ ಬೇರೆ ರಾಜ್ಯದಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೋ ಎನ್ನುವ ಸಂಶಯ ಕಾಡುತ್ತಿದೆ ಎಂದು ಚಿತ್ರತಂಡ ನೋವು ವ್ಯಕ್ತ ಪಡಿಸುತ್ತಿದೆ.

ಇದಷ್ಟೇ ಅಲ್ಲಾ ಇನ್ನು ಮಂಗಳವಾರ (ಮೇ 1) ಬಿಡುಗಡೆ ಯಾಗಲಿರುವ ಅಣ್ಣಾಬಾಂಡ್ ಚಿತ್ರದ ನಂತರ ಇನ್ನೆಷ್ಟು ಚಿತ್ರಮಂದಿರ ಕೈತಪ್ಪಿ ಹೋಗಲಿದೆಯೋ ಎನ್ನುವ ಭಯ ಕೂಡ ಪರಿ ಚಿತ್ರ ತಂಡಕ್ಕೆ ಕಾಡುತ್ತಿದೆ. ಒಂದು ವರ್ಷದಿಂದ ಪ್ರರಿಶ್ರಮ ಪಟ್ಟು ಚಿತ್ರ ತಯಾರಿಸಿದ್ದೇವೆ, ಮತ್ತು ನಮ್ಮ ಚಿತ್ರದ ಮೇಲೆ ನಮಗೆ ನಂಬಿಕೆ ಇದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರು.

ನಮ್ಮ ಚಿತ್ರದ ಮೇಲೆ ಕನ್ನಡಿಗರ ಆಶೀರ್ವಾದವಿರಲಿ ಎನ್ನುವುದು ಚಿತ್ರತಂಡದ ಕೋರಿಕೆ. 'ಪರಿ' ಚಿತ್ರಕ್ಕೆ ಒಳ್ಳೆದಾಗಲಿ, All the best.

English summary
Jr. NTR's Telugu movie 'Dammu' releasing in 150 theaters in Karnataka. Kannada movie 'Pari' has got only 40 theaters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada