»   » ಯೋಗರಾಜ್ ಭಟ್ಟರ 'ಡ್ರಾಮಾ'ಕ್ಕೆ ಪ್ರಕಾಶ್ ರೈ

ಯೋಗರಾಜ್ ಭಟ್ಟರ 'ಡ್ರಾಮಾ'ಕ್ಕೆ ಪ್ರಕಾಶ್ ರೈ

Posted By: * ಶ್ರೀರಾಮ್ ಭಟ್
Subscribe to Filmibeat Kannada

ಭಟ್ಟರ ಡ್ರಾಮಾ ತಂಡದಿಂದ ಹೊಸ ಹೊಸ ಸುದ್ದಿಗಳು ಬರುತ್ತಿವೆ. ಮುಹೂರ್ತವಿನ್ನೂ ಆಗಿಲ್ಲ. ಅದಕ್ಕೂ ಮೊದಲೇ ಸಾಕಷ್ಟು ಬದಲಾವಣೆಗಳು, ವಿಶೇಷ ಸಮಾಚಾರಗಳು ಒಂದೊಂದಾಗಿ ಈಚೆ ಬರುತ್ತಿವೆ. ಭಟ್ಟರ ಚಿತ್ರದಿಂದ ನಟಿ ಭಾಮಾ 'ಔಟ್' ಆಗಿ ಆ ಜಾಗಕ್ಕೆ ರಾಧಿಕಾ ಪಂಡಿತ್ 'ಇನ್' ಆಗಿರುವುದು ಈಗ ಹಳೇ ಸುದ್ದಿ. ಹೊಸ ಸುದ್ದಿಯೆಂದರೆ ಡ್ರಾಮಾ ತಂಡಕ್ಕೆ ಪ್ರಕಾಶ್ ರೈ ಹೊಸತಾಗಿ ಸೇರ್ಪಡೆಯಾಗಿದ್ದಾರೆ.

ಭಟ್ಟರು ಮೊನ್ನೆ ಜಯಣ್ಣನ ಜೊತೆಗೂಡಿ ಚೆನ್ನೈಗೆ ಹೋಗಿದ್ದರು. ಅಲ್ಲಿ ಪ್ರಕಾಶ್ ರೈ ಭೇಟಿಯಾಗಿ ಅವರ ಕಾಲ್ ಶೀಟ್ ಪಕ್ಕಾ ಮಾಡಿಕೊಂಡು ಬಂದಿದ್ದಾರೆ. ಅಂದಹಾಗೆ, ನಾಯಕ ಯಶ್ ಹಾಗೂ ಪ್ರಕಾಶ್ ರೈ ಎರಡನೇ ಬಾರಿಗೆ ಜೊತೆಯಾಗುತ್ತಿದ್ದಾರೆ. ಈ ಮೊದಲು ರಾಜಧಾನಿಯಲ್ಲಿ ಯಶ್, ರೈ ಒಟ್ಟಾಗಿ ನಟಿಸಿದ್ದರು.

ಮಾರ್ಚ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ಅದಕ್ಕೂ ಮೊದಲು ಮುಹೂರ್ತ ಗ್ಯಾರಂಟಿ ಎನ್ನಲಾಗಿದೆ. ರಾಧಿಕಾ ಪಂಡಿತ್ ಮತ್ತು ಯಶ್, ಅಷ್ಟರಲ್ಲಿ ತಮ್ಮ ಕೈನಲ್ಲಿರುವ ಚಿತ್ರಗಳ ಚಿತ್ರೀಕರಣ ಮುಗಿಸಿ ಭಟ್ಟರ ಚಿತ್ರಕ್ಕೆ ಹಾಜರಿ ನೀಡಲಿದ್ದಾರೆ. ಪರಭಾಷೆಯಲ್ಲಿ ಮಿಂಚುತ್ತಿರುವ ಕನ್ನಡಿಗ ಪ್ರಕಾಶ್ ರೈ ಅವರನ್ನು ಭಟ್ಟರ ಡ್ರಾಮಾ ಮೂಲಕ ಮತ್ತೊಮ್ಮೆ ಕನ್ನಡಿಗರು ನೋಡಬಹುದು. (ಒನ್ ಇಂಡಿಯಾ ಕನ್ನಡ)

English summary
Actor Prakash Rai acts in Yograj Bhat movie Drama. This movie will starts from March 1st Week. Yash and Radhika Pandit in lead role. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X