»   » ಅರೇ, ನಿಖಿತಾ ಅರೇಂಜ್ಡ್ ಮ್ಯಾರೇಜ್ ಆಗ್ತಾರಂತೆ!

ಅರೇ, ನಿಖಿತಾ ಅರೇಂಜ್ಡ್ ಮ್ಯಾರೇಜ್ ಆಗ್ತಾರಂತೆ!

Posted By:
Subscribe to Filmibeat Kannada
Nikita Thukral
ನಟಿ ನಿಖಿತಾ ಸದ್ಯದಲ್ಲೇ ಮದುವೆಯಾಗುತ್ತಾರಂತೆ. ದಕ್ಷಿಣ ಭಾರತದ ಸಿನಿಪ್ರೇಕ್ಷಕರಿಗೆ ನಿಖಿತಾ ಈಗ ಚಿರಪರಿಚಿತ. ಅವರ ಅಭಿಮಾನಿಗಳಿಗೆ ಖಂಡಿತಾ ಇದು ಶಾಕ್ ನ್ಯೂಸ್. ಆದರೆ ನಿಖಿತಾ ಮಾತಿನಲ್ಲಿ ಖಚಿತತೆಯಿದೆ, ಪ್ರಾಮಾಣಿಕತೆಯೂ ಇದೆ. ಹಾಗಾಗಿ, ಆದಷ್ಟು ಬೇಗ ನಿಖಿತಾ ಮದುವೆ ಸುದ್ದಿ ಬರಲಿರುವುದು ಖಾತ್ರಿ.

"ನನ್ನ ಅಪ್ಪ ಬದುಕಿರುವಾಗಲೇ ಮದುವೆ ಮಾತುಕತೆಗಳು ನಡೆದಿದ್ದವು. ಆದರೆ ಅವರು ತೀರಿಕೊಂಡಿದ್ದರಿಂದ ಎಲ್ಲವೂ ಒಮ್ಮೆ ಪಕ್ಕಕ್ಕೆ ತಳ್ಳಲ್ಪಟ್ಟಿತ್ತು. ಆದರೆ ಈಗ ಮತ್ತೆ ಅವರ ವರ್ಷದ ಕಾರ್ಯಕ್ರಮ ಮುಗಿದ ನಂತರ ಮದುವೆ ಮಾತುಕತೆ ಮುಂದುವರಿಯಲಿದೆ. ಖಂಡಿತಾ ಬೇಗ ಮದುವೆಯಾಗುತ್ತೇನೆ ಎಂದಿದ್ದಾರೆ" ಎಂದಿದ್ದಾರೆ ನಿಖಿತಾ.

"ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗುತ್ತೇನೆ. ಆಯ್ಕೆ ನನ್ನದಲ್ಲ, ಅಮ್ಮನದು. ಆಕೆ ಹೇಳುವ ಹುಡುಗನ ಜತೆ ಹಸೆಮಣೆಯೇರುತ್ತೇನೆ. ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ. ಎಂದಿದ್ದಾರೆ. ಸದ್ಯಕ್ಕೆ ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ 'ಗೌರಿಪುತ್ರ' ಚಿತ್ರದ ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿರುವ ನಿಖಿತಾ, ಮುಕ್ತವಾಗಿ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Actress Nikita Thukral told that she gets marriage very soon. She opinions that she marries the one, whom her mother selected. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X