For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬುಗೆ ಹೀರೋಯಿನ್ ಅಕ್ಷರಾ ಗೌಡ

  By Rajendra
  |

  ಕ್ರಿಕೆಟಿಗ ಯುವರಾಜ್ ಸಿಂಗ್ ಜೊತೆ ಗಾಸಿಪ್ ಕಾಲಂಗಳಲ್ಲಿ ಮಿಂಚಿದ್ದ ಬೆಂಗಳೂರು ಬಾಲೆ ಅಕ್ಷರಾ ಗೌಡಗೆ ತೆಲುಗಿನಲ್ಲಿ ಭರ್ಜರಿ ಚಾನ್ಸ್ ಸಿಕ್ಕಿದೆ. ತೆಲುಗು ಬಾಕ್ಸಾಫೀಸ್‌ನಲ್ಲಿ ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿರುವ ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಸಿಕ್ಕಿದೆ.

  ಸುಕುಮಾರ್ ನಿರ್ದೇಶಿಸಲಿರುವ ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕೆ ಅಕ್ಷರಾ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರದಲ್ಲಿ ಅಕ್ಷರಾ ಪೂರ್ಣ ಪ್ರಮಾಣದ ನಾಯಕಿ. ಇದಕ್ಕೂ ಮುನ್ನ ಕಿಂಗ್ ಫಿಷರ್ ಕ್ಯಾಲೆಂಡರ್ ಬೆಡಗಿ ಏಂಜಲಾ ಜಾನ್ಸನ್ ಅವರನ್ನು ಆಯ್ಕೆ ಮಾಡಲು ಮುಂದಾಗಿದ್ದರು. ಆದರೆ ಕಡೆಗೆ ಅಕ್ಷರಾ ಅವರಿಗೆ ಚಾನ್ಸ್ ಸಿಕ್ಕಿದೆ.

  ತಮನ್ನಾ ಭಾಟಿಯಾ ಜೊತೆಗೂ ಮಾತುಕತೆಯಾಗಿತ್ತಂತೆ. ಆದರೆ ಡೇಟ್ಸ್ ಹೊಂದಾಣಿಕೆಯಾಗದೆ ತಮನ್ನಾ ಕೂಡ ಗಪ್ ಚುಪ್ ಆಗಿದ್ದರು. ಒಟ್ಟಿನಲ್ಲಿ ಅವರಿಗೆಲ್ಲರಿಗೂ ಮಿಸ್ ಆದ ಚಾನ್ಸ್ ಅಕ್ಷರಾ ಮಡಿಲಿಗೆ ಸುನಾಯಾಸವಾಗಿ ಬಂದು ಬಿದ್ದಿದೆ. ಈ ಮೂಲಕ ತೆಲುಗಿನಲ್ಲಿ 'ಅಕ್ಷರಾ'ಭ್ಯಾಸ ಆರಂಭವಾಗಿದೆ. (ಏಜೆನ್ಸೀಸ್)

  English summary
  Bangalore lass Akshara Gowda, who made her Bollywood debut with Chitkabrey, has bagged a biggie, which could turn out to be a career changer flick for her. The actress has reportedly bagged a Telugu film starring superstar Mahesh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X