»   » ನಟ ಬುಲೆಟ್ ಪ್ರಕಾಶ್‌ ಕಾಲಿನ ಮೇಲೆ ಹರಿದ ಕಾರು

ನಟ ಬುಲೆಟ್ ಪ್ರಕಾಶ್‌ ಕಾಲಿನ ಮೇಲೆ ಹರಿದ ಕಾರು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್‌ ಕಾಲಿನ ಮೇಲೆ ಕಾರು ಹರಿದ ಪರಿಣಾಮ ಅವರ ಬಲಗಾಲಿನ ಮೂಳೆ ಮುರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಅವರು ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ಸ್ವತಃ ಅವರೇ ವಿವರ ನೀಡಿದ್ದಾರೆ.

ತೀರಾ ಇತ್ತೀಚೆಗೆ ಅವರು ಯಲಹಂಕದ ದೇವಸ್ಥಾನ ಒಂದರಲ್ಲಿ ಪೂಜೆ ಮುಗಿಸಿಕೊಂಡು ಹೊರಬರುತ್ತಿರಬೇಕಾದರೆ ಈ ಘಟನೆ ನಡೆದಿದೆ. ರಿವರ್ಸ್ ಗೇರಿನಲ್ಲಿ ಬಂದ ಕಾರು ಇವರ ಕಾಲಿನ ಮೇಲೆ ಹರಿದಿದೆ. ಹರಿದ ರಭಸಕ್ಕೆ ಕಾಲಿನ ಮೂಲೆ ಮುರಿದಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಬುಲೆಟ್ ಪ್ರಕಾಶ್ ದೇವಸ್ಥಾನದಿಂದ ಹೊರಬರುತ್ತಿರಬೇಕಾದರೆ, ಕೆಲ ಅಭಿಮಾನಿಗಳು ಹಸ್ತಾಕ್ಷರಕ್ಕಾಗಿ ಮುಗಿಬಿದ್ದಾರೆ. ಅವರ ಕಾರಿನ ಚಾಲಕ ರಿವರ್ಸ್ ಗೇರ್‌ನಲ್ಲಿ ತೀರಾ ಸನಿಹಕ್ಕೆ ಬರಲು ಹೋದಾಗ ಕಾರಿನ ಮೇಲೆ ಹತ್ತಿಸಿದ್ದಾನೆ. ನಡೆದದಿಷ್ಟೇ.

ಅಪಘಾತಕ್ಕಿಂತಲೂ ಅವರಿಗೆ ಬ್ಯಾಡ್ ಎಕ್ಸ್‌ಪೀರಿಯನ್ಸ್ ಇಂಡಸ್ಟ್ರಿಯಲ್ಲಿ ಆಗಿದೆ. ಬುಲೆಟ್ ಪ್ರಕಾಶ್ ಸತ್ತೇ ಹೋದರು ಎಂದು ಕೆಲವರು ಸುದ್ದಿ ಹಬ್ಬಿಸಿದ್ದರಂತೆ. ಮುಂಗಡ ಹಣ ಕೊಡಲು ಬಂದ ನಿರ್ಮಾಪಕರೊಬ್ಬರು ಇವರ ಕಾಲನ್ನು ನೋಡಿ ಎಸ್ಕೇಪ್ ಆದರಂತೆ. ಬಳಿಕ ಅವರನ್ನು ಕರೆದು ಆಕ್ಸಿಡೆಂಟ್ ಬಳಿಕ ತಾವು ಎಂಟು ಚಿತ್ರಗಳಲ್ಲಿ ಅಭಿನಯಿಸುತ್ತಿರುವುದಾಗಿ ತಿಳಿಸಿದರಂತೆ. (ಏಜೆನ್ಸೀಸ್)

English summary
Kannada films comedy actor Bullet Praksh injured in an accident. His right leg has fractured. When his car driver who was taking the car reverse the incident happened. Now he is fine.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X