»   »  ಕಾರ್ಮಿಕರ ದಿನದಂದು ಎಷ್ಟು ನಗ್ತಿ ನಗು!

ಕಾರ್ಮಿಕರ ದಿನದಂದು ಎಷ್ಟು ನಗ್ತಿ ನಗು!

Subscribe to Filmibeat Kannada
Ananth Nag
ಶ್ರೀಕಂಠೇಶ್ವರ ಫಿಲಂ ಲಾಂಛನದಲ್ಲಿ ನಿರ್ಮಾಣವಾಗಿರುವ 'ಎಷ್ಟು ನಗ್ತಿ ನಗು' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರ ನೋಡುಗರನ್ನು ರಂಜಿಸಲು ಬರುತ್ತಿದೆ.

'ಎಷ್ಟು ನಗ್ತಿ ನಗು ಹಲವು ವರ್ಷಗಳಿಂದ ಪ್ರೇಕ್ಷಕರಿಗೆ ಮೆಚ್ಚುಗೆಯಾದ ನಗೆ ನಾಟಕ. ಈ ಜನಪ್ರಿಯ ನಾಟಕವನ್ನು ಸಿನೆಮಾ ಮಾಡಿದವರು ನಿರ್ಮಾಪಕ ಚಿಂದೋಡಿ ಶ್ರೀಕಂಠೇಶ. ನಾಟಕದಷ್ಟೇ ಜನಪ್ರಿಯತೆಯನ್ನು ಈ ನಮ್ಮ ಸಿನೆಮಾ ಗಳಿಸಲಿದೆ ಎಂಬ ನಂಬಿಕೆ ನಿರ್ಮಾಪಕರಿಗಿದೆ.

ಅನಂತನಾಗ್, ದ್ವಾರಕೀಶ್, ಮೋಹನ್, ಶ್ರೀಕಂಠೇಶ, ಸುಧಾರಾಣಿ, ಬ್ಯಾಂಕ್ ಜನಾರ್ದನ್ ಅವರಂತ ಹಿರಿಯ ಕಲಾವಿದರು ಹಾಗೂ ಹೊಸನಟಿಯರಾದ ರೋಶಿನಿ, ಸನಾರೊಂದಿಗೆ ನಾಯಕನಾಗಿ ಚಿಂದೋಡಿ ವಿಜಯಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬೆಂಗಳೂರು, ಮೈಸೂರು ಹಾಗೂ ಕುಂದಾಪುರದ ಆಸುಪಾಸಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಚಿಂದೋಡಿ ಬಂಗಾರೇಶರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರವನ್ನು ಚಿಂದೋಡಿ ಮದುಕೇಶ ನಿರ್ದೇಶಿಸಿದ್ದಾರೆ. ಎಂ.ಎಸ್.ಮಾರುತಿ ಸಂಗೀತ, ಏಳುಕೋಟಿ ಚಂದ್ರು ಛಾಯಾಗ್ರಹಣ 'ಎಷ್ಟು ನಗ್ತಿ ನಗು' ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್ ಚಿತ್ರ
ಅನಂತನಾಗ್ ಮತ್ತು ಸುಹಾಸಿನಿ 'ಎರಡನೇ ಮದುವೆ'!
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
ಶಿವಕಾಶಿಯಲ್ಲಿ ಒಂದಾದ ಅನಂತ್ ನಾಗ್ ,ಲಕ್ಷ್ಮಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada