»   » ಗೀತಪ್ರಿಯಗೆ ನೆರವಿನ ಹಸ್ತ ಚಾಚಿದ ಹ್ಯಾಟ್ರಿಕ್ ಹೀರೋ

ಗೀತಪ್ರಿಯಗೆ ನೆರವಿನ ಹಸ್ತ ಚಾಚಿದ ಹ್ಯಾಟ್ರಿಕ್ ಹೀರೋ

Posted By:
Subscribe to Filmibeat Kannada

ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಿರಿಯ ಗೀತರಚನಕಾರ ಗೀತಪ್ರಿಯ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೆರವಿನ ಹಸ್ತ ಚಾಚಿದ್ದಾರೆ. ತಮ್ಮ ಪತ್ನಿ ಗೀತಾ ಅವರೊಂದಿಗೆ ಗೀತಪ್ರಿಯ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಶಿವಣ್ಣ ವಿಚಾರಿಸಿಕೊಂಡರು.

ಬಳಿಕ ರು.50 ಸಾವಿರದ ಚೆಕ್‌ನ್ನು ಗೀತಪ್ರಿಯಾ ದಂಪತಿಗಳಿಗೆ ಹಸ್ತಾಂತರಿಸಿದರು. ಈ ಮೂಲಕ ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಸದಾ ತಾ ಮುಂದು ಎಂಬುದನ್ನು ಶಿವಣ್ಣ ಮತ್ತೊಮ್ಮೆ ನಿರೂಪಿಸಿಕೊಂಡಿದ್ದಾರೆ. ಗೀತಪ್ರಿಯ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಶಿವಣ್ಣ ಶುಭ ಹಾರೈಸಿದರು.

ವರನಟ ಡಾ.ರಾಜ್‌ಕುಮಾರ್ ಅವರ 'ಮಣ್ಣಿನ ಮಗ' ಸೇರಿದಂತೆ ಹಲವು ಉತ್ತಮ ಚಿತ್ರಗಳನ್ನು ಗೀತಪ್ರಿಯ ಅವರು ಕೊಟ್ಟಿದ್ದಾರೆ. ಇತ್ತೀಚೆಗೆ ಕರ್ನಾಟಕ ಘನ ಸರಕಾರ ಗೀತಪ್ರಿಯ ಅವರ ಚಿಕಿತ್ಸೆಗೆ ರು.1.50 ಲಕ್ಷ ಧನ ಸಹಾಯ ನೀಡಿತ್ತು. ಬಿಬಿಎಂಪಿ ಕೂಡ ರು.1 ಲಕ್ಷ ಆರ್ಥಿಕ ಸಹಾಯ ಮಾಡಿದೆ. (ಒನ್‍ಇಂಡಿಯಾ ಕನ್ನಡ)

English summary
Hat Trick Hero Shivarajkumar has been given Rs.50,000 aid for Kannada lyricist Geethapriya. Geethapriya (81), a living legend of Kannada filmdom is fighting ill health. Shivarajkumar has handed over a cheque of Rs.50,000 to the Geethapriya couple in his Mahalakshmilayout residence.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X