»   » ಬಿ ಟಿ ಲಲಿತಾ ನಾಯಕ್ ಚಿತ್ರ ಜೇಮ್ಸ್ ಪಾಂಡು

ಬಿ ಟಿ ಲಲಿತಾ ನಾಯಕ್ ಚಿತ್ರ ಜೇಮ್ಸ್ ಪಾಂಡು

Posted By:
Subscribe to Filmibeat Kannada

ಲೇಖಕಿ ಹಾಗೂ ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್ ಸಮರ್ಪಿಸುತ್ತಿರುವ ಚಿತ್ರ 'ಜೇಮ್ಸ್ ಪಾಂಡು'. ಈ ಚಿತ್ರವನ್ನು ಅವರು ಮಾದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಆಕ್ಷನ್, ಕಟ್ ಹೇಳಿದವರು ಲಲಿತಾ ನಾಯಕ್ ಅವರ ಪುತ್ರ ಓಂ ಪ್ರಕಾಶ್ ನಾಯಕ್.

ಕೇವಲ ನಿರ್ದೇಶನಕ್ಕಷ್ಟೆ ಸೀಮಿತವಾದ ಓಂ ಪ್ರಕಾಶ್, ಕತೆ, ಚಿತ್ರಕತೆ ರಚಿಸುವುದರ ಜೊತೆಗೆ ಚಿತ್ರದ ಮುಖ್ಯ ಪಾತ್ರಧಾರಿ. 'ಜೇಮ್ಸ್ ಪಾಂಡು' ಚಿತ್ರವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಚಿತ್ರದ ಹೆಸರೇ ಹೇಳುವಂತೆ ಇದೊಂದು ಹಾಸ್ಯ ಪ್ರಧಾನ ಚಿತ್ರ.

ವಂಚಕರಿಬ್ಬರು ಮದುವೆಯಾದರೆ ಏನೆಲ್ಲಾ ಎಡವಟ್ಟುಗಳಾಗುತ್ತವೆ ಎಂಬುದು ಚಿತ್ರದ ತಿರುಳು. ಈ ಚಿತ್ರದ ವಿಶೇಷತೆಗಳೆಂದರೆ, ಬೆಂಗಳೂರಿನ ಸುತ್ತಮುತ್ತ ಕೇವಲ 20 ದಿನಗಳಲ್ಲಿ ಚಿತ್ರೀಕರಿಸಿರುವುದು. ಮಧುರಾ ಅವರ ಸಂಗೀತ ನಿರ್ದೇಶನ, ಮಹದೇವ ಮತ್ತು ವಿಶ್ವನಾಥ ಶಾಸ್ತ್ರಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇದೊಂದು ಅತ್ಯಲ್ಪ ಬಜೆಟ್ ನ ಚಿತ್ರವಾಗಿದ್ದು ತಾರಾಗಣದಲ್ಲಿ ಅನು, ಉಷಾ ರಮೇಶ್, ಬಾಲಸುಬ್ರಹ್ಮಣ್ಯಂ, ಅವಿನಾಶ್ ಭಾರದ್ವಾಜ್ ಮುಂತಾದವರಿದ್ದಾರೆ. ಶಂಕರನಾಗ್ ಫಿಲ್ಮ್ ಇನಿಸ್ಟಿಟ್ಯೂಟ್ ನ ಹಲವಾರು ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಕ್ಯಾಮೆರಾಗೆ ಮುಖ ಮಾಡಿರುವುದು ಚಿತ್ರದ ಮತ್ತೊಂದು ವಿಶೇಷ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada