»   » ರಜಿನಿ ಅಳಿಯನ ಕೈಗೆ ಕನ್ನಡ ದುನಿಯಾ

ರಜಿನಿ ಅಳಿಯನ ಕೈಗೆ ಕನ್ನಡ ದುನಿಯಾ

Posted By:
Subscribe to Filmibeat Kannada

ರಜನಿಕಾಂತ್ ಅಳಿಯ ಧನುಷ್ ಚಿತ್ರಗಳನ್ನು ಒಂದೆಡೆ ಲೂಸ್ ಮಾದ ಯೋಗಿ ಕನ್ನಡಕ್ಕೆ ಭಟ್ಟಿ ಇಳಿಸುತ್ತಿದ್ದರೆ, ಇನ್ನೊಂದೆಡೆ ರಜನಿ ಪ್ರಭಾವದಿಂದಲೋ ಏನೋ ಧನುಷ್ ಕನ್ನಡ ಚಿತ್ರಗಳತ್ತ ಕಣ್ಣು ಹಾಯಿಸುತ್ತಿದ್ದಾರೆ. ಪ್ರೇಮ್ ನಿರ್ದೇಶನದ ಶಿವರಾಜ್ ಅಭಿನಯಿಸಿದ್ದ ಜೋಗಿ ಚಿತ್ರವನ್ನು ತಮಿಳಿನಲ್ಲಿ ಮಾಡಲು ಹೋಗಿ ಕೈಸುಟ್ಟು ಕೊಂಡರೂ ಉತ್ತಮ ಕನ್ನಡ ಚಿತ್ರಗಳತ್ತ ಧನುಷ್ ಚಿತ್ತ ನೆಟ್ಟಿದೆ.

ಚಿತ್ರ ವಿಚಿತ್ರ ಪಾತ್ರಗಳನ್ನು ಸೃಷ್ಟಿಸುವಲ್ಲಿ, ನಿಭಾಯಿಸುವಲ್ಲಿ ಧನುಷ್ ಹಾಗೂ ಅವರ ಅಣ್ಣ ಸೆಲ್ವ ರಾಘವನ್ (ಕಾದಲ್ ಕೊಂಡೈನ್, 7ಜಿ ರೈನ್ ಬೋ ಕಾಲೋನಿ, ಯಾರಡಿ ನೀ ಮೋಹಿನಿ, ಅಯಿರಥಿಲ್ ಒರುವನ್ ..ಇತ್ಯಾದಿ)ಲೋಕ ಪ್ರಸಿದ್ಧಿಗಳಿಸಿದ್ದಾರೆ. ಧನುಷ್ ಅವರ ಕಾದಲ್ ಕೊಂಡೈನ್ ಚಿತ್ರವನ್ನು 'ನಿನ್ನ ಮನೆವರೆಗೂ ನಾನು ಬರಬಹುದೇ ಎಂದು ಹಾಡುತ್ತ..ಯೋಗಿ ನಡೆದಿದ್ದಷ್ಟೇ ಬಂತು..ರಾವಣ ಕನ್ನಡದಲ್ಲಿ ಘರ್ಜಿಸಲಿಲ್ಲ. ಧನುಷ್ ರ ಪೊಲ್ಲಾದವನ್( ರಮ್ಯ ಅಲಿಯಾಸ್ ದಿವ್ಯಸ್ಪಂದನ ನಾಯಕಿ) ಚಿತ್ರ ಇನ್ನೇನು ಕನ್ನಡದಲ್ಲಿ ಪುಂಡ ಎಂಬ ಹೆಸರಿನಲ್ಲಿ ಯೋಗಿ ಬೈಕ್ ಹತ್ತಿಸಿಕೊಂಡು ಊರೂರು ಅಲೆಯಲಿದ್ದಾರೆ. ಇಲ್ಲಿ ಹೇಗೆ ರಿಮೇಕ್ ಚಿತ್ರಕ್ಕೆ ನಮ್ಮ ಮಹಾನ್ ನಟರು ಜೋತುಬಿದ್ದಿದ್ದಾರೋ ಅಲ್ಲೂ ಕೂಡ ಧನುಷ್ ಗೆ ಅದೇ ಗತಿ. ಯಾರಡಿ ನೀ ಮೋಹಿನಿ, ಕುಟ್ಟಿ, ರೇಡಿ, ಮಾಪಿಳೈ, ಸೀಡನ್ ಅವರ ಪಟ್ಟಿಯಲ್ಲಿರುವ ರಿಮೇಕ್ ಚಿತ್ರಗಳು.

ಧನುಷ್ ಪಟ್ಟಿಗೆ ಇತ್ತೀಚಿನ ಸೇರ್ಪಡೆ, ಕನ್ನಡದಸೂಪರ್ ಹಿಟ್ ಚಿತ್ರ ದುನಿಯಾ. ಸೂರಿ ನಿರ್ದೇಶನದಲ್ಲಿ ವಿಜಯ್ ಅಭಿನಯದಲ್ಲಿ ಜನಮನಗೆದ್ದ ಚಿತ್ರವನ್ನು ತಮಿಳು ಪ್ರೇಕ್ಷಕರ ಮುಂದಿಡಲು ಧನುಷ್ ತಯಾರಿ ನಡೆಸಿದ್ದಾರೆ. ನಿರ್ಮಾಪಕ ಸಿದ್ದರಾಜು( ಯೋಗಿ ಅವರ ಅಪ್ಪ) ಅವರಿಂದ ಚಿತ್ರದ ಹಕ್ಕುಗಳನ್ನು ಧನುಷ್ ಪಡೆದಿದ್ದಾರೆ. ಈಗಾಗಲೆ ನಿರ್ದೇಶಕ ಕಸ್ತೂರಿ ರಾಜನ ಪುತ್ರರ ಚಿತ್ರಗಳು ಕನ್ನಡಕ್ಕೆ ಬಂದು ಒಂದಷ್ಟು ಸುದ್ದಿ ಮಾಡಿವೆ. ಇಲ್ಲಿನ ಚಿತ್ರಗಳು ಅಲ್ಲಿಗೆ ಹೋಗಿ ಹಾಗೆ ಸುದ್ದಿಮಾಡಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada