For Quick Alerts
  ALLOW NOTIFICATIONS  
  For Daily Alerts

  ರಾಮುಗೆ ಕೋಟಿ 'ಶಕ್ತಿ' ತುಂಬಿದ ಮಡದಿ ಮಾಲಾಶ್ರೀ

  By Rajendra
  |

  ಗೃಹಿಣಿ, ಎರಡು ಮಕ್ಕಳ ತಾಯಿಯಾಗಿರುವ ಮಾಲಾಶ್ರೀ ಅಭಿನಯದ 'ಶಕ್ತಿ' ಚಿತ್ರ ಗಾಂಧಿನಗರ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಚಿತ್ರದ ಗಳಿಕೆ ಎಲ್ಲರ ನಿರೀಕ್ಷೆಗಳನ್ನೂ ಉಲ್ಟಾ ಪಲ್ಟಾ ಮಾಡಿದೆ. ಮುಂಬೈ ಕರ್ನಾಟಕ, ಚಿತ್ರದುರ್ಗ, ಬಳ್ಳಾರಿ, ಹೈದರಾಬಾದ್ ಕರ್ನಾಟಕ ಮತ್ತು ಮಂಗಳೂರಿನಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತಿದೆ.

  ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಹೇಳಿಕೊಳ್ಳುವಂತಹ ಕಲೆಕ್ಷನ್ ಇಲ್ಲದಿದ್ದರೂ ಸುಮಾರಾಗಿ ದುಡ್ಡು ಮಾಡಿದೆ. ಇದುವರೆಗೂ 'ಶಕ್ತಿ' ಚಿತ್ರ ಐದು ಕೋಟಿಗೂ ಅಧಿಕ ವಹಿವಾಟು ನಡೆಸಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ರಾಮು. ವಿಶಾಲ ಕರ್ನಾಟಕದ ಹಂಚಿಕೆದಾರರಾದ ಅವರ ಖಜಾನೆಗೆ ದುಡ್ಡು ಹರಿದುಬಂದಿದೆ.

  ಏತನ್ಮಧ್ಯೆ ಚಿತ್ರದ ಡಬಿಂಗ್ ರೈಟ್ಸ್ ಕೂಡ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಮಲಯಾಳಂ ಮತ್ತು ತೆಲುಗು ಡಬಿಂಗ್ ರೈಟ್ಸ್‌ಗೆ ಮಾತುಕತೆ ನಡೆದಿದ್ದು, ರು.35 ರಿಂದ 40 ಲಕ್ಷಕ್ಕೆ ಮಾರಾಟವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ರಾಮು. ಒಟ್ಟಿನಲ್ಲಿ ತಮ್ಮ ಮಡದಿ ಮೇಲೆ ಹಾಕಿದ ಬಂಡವಾಳ ರಾಮು ಪಾಲಿಗೆ ವರದಾನವಾಗಿದೆ. (ಎಜೆನ್ಸೀಸ್)

  English summary
  Actress Malashri lead Kannada movie Shakti makes Rs.5.50 Cr profit says boxoffice reports. The movie produced by her husband and top line producer Ramu. It is also learnt that the film is being offered Rs.35 to 40 lakh for the Telugu and Malayalam dubbing rights of the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X