»   » ‘ಮಸ್ತ್ ಮಜಾ ಮಾಡಿ’ ಭರ್ಜರಿ ಹಾಸ್ಯದೌತಣ

‘ಮಸ್ತ್ ಮಜಾ ಮಾಡಿ’ ಭರ್ಜರಿ ಹಾಸ್ಯದೌತಣ

Subscribe to Filmibeat Kannada

Mast Maja Maadi: run away hit ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತದ ನಡುವೆಯೂ ಬಹು ತಾರಾಗಣದ "ಮಸ್ತ್ ಮಜಾ ಮಾಡಿ" ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಮೂರನೇ ವಾರ ಕಳೆದರೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆಯಾದ ರಾಜ್ಯದ ಐವತ್ತು ಕೇಂದ್ರಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ದೊರೆತ ಅಭೂತಪೂರ್ವ ಪ್ರೋತ್ಸಾಹ ಕಂಡು ಚಿತ್ರದ ನಿರ್ಮಾಪಕರಾದ ಸೌಂದರ್ಯ ಜಗದೀಶ್, ಅಣಜಿ ನಾಗರಾಜ್ ಮತ್ತು ಪ್ರತಾಪ್ ಬಹಳ ಖುಷಿಯಾಗಿದ್ದಾರೆ. ಚಿತ್ರ ನೋಡಿದ ಜನ ಮಸ್ತ್ ಮಜಾ ಮಾಡಿದ್ದಾರೆ ಎನ್ನುತ್ತಾರೆ ನಿರ್ಮಾಪಕ ಜಗದೀಶ್.

ಐದಾರು ತಿಂಗಳ ಹಿಂದೆ ಜನರಿಗೆ ಯಾರೆಂದೇ ಗೊತ್ತಿಲ್ಲದ ವ್ಯಕ್ತಿ ನಾನು, ಚಿತ್ರ ಬಿಡುಗಡೆ ನಂತರ ಜನ ನನ್ನನ್ನ ಗುರುತಿಸುತ್ತಿರುವುದು ನನಗೆ ಹೆಮ್ಮೆಯ ವಿಚಾರ ಎನ್ನುತ್ತಾರೆ ನಿರ್ದೇಶಕ ಅನಂತರಾಜು. ಅಷ್ಟೇ ಅಲ್ಲದೆ, ನಟ ವಿಜಯ್ ರಾಘವೇಂದ್ರ ಜನರ ಮಧ್ಯೆ ಕುಳಿತು ಚಿತ್ರ ನೋಡಿ ಎಂಜಾಯ್ ಮಾಡಿದ್ದಾರ೦ತೆ. ಸದ್ಯದ ಆರ್ಥಿಕ ಪರಿಸ್ಥಿಯಲ್ಲಿ ಜನ ಚಿತ್ರಮಂದಿರಕ್ಕೆ ಬರುತ್ತಾರೋ ಎಂದು ಚಿಂತಿಸುತ್ತಿದ್ದ ನಟ ದಿಗಂತ್ ಜನರ ಪ್ರತಿಕ್ರಿಯೆ ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ನಾಲ್ವರು ನಾಯಕರದ್ದೇ ಚಿತ್ರದುದ್ದಕ್ಕೂ ಕಾರುಬಾರಾದರೂ ಸುದೀಪ್ ಹಾಗೂ ಜೆನ್ನಿಫರ್ ಅವರು ಚಿತ್ರದಲ್ಲಿರುವುದು ಪ್ಲಸ್ ಪಾಯಿಂಟ್ ಆಗಿದೆ. ಉಪ್ಪಿ ಹಾಡು ಕೂಡ ಮೆಚ್ಚುಗೆ ಗಳಿಸಿದೆ. ಒಟ್ಟಿನಲ್ಲಿ ಈ ವರ್ಷದ ಕೆಲವೇ ಕೆಲವು ಹಿಟ್ ಚಿತ್ರಗಳ ಪಟ್ಟಿಯಲ್ಲಿ "ಮಸ್ತ್ ಮಜಾ ಮಾಡಿ" ಚಿತ್ರವನ್ನು ಕೂಡ ಸೇರಿಸಬಹುದಾ ?

(ದಟ್ಸ್ ಕನ್ನಡ ಸಿನಿವಾರ್ತೆ)
ನಕ್ಕು ನಲಿಸಿ ಸುಸ್ತಾಗಿಸುತ್ತೆ ಮಸ್ತ್ ಮಜಾ ಮಾಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada