For Quick Alerts
  ALLOW NOTIFICATIONS  
  For Daily Alerts

  ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ರಮ್ಯಾ ತೆರೆಮರೆ ಕಸರತ್ತು

  By Rajendra
  |

  ಲಕ್ಕಿ ಸ್ಟಾರ್ ರಮ್ಯಾ ರಾಜಕೀಯಕ್ಕೆ ಪದಾರ್ಪಣೆ ಮಾಡುವ ಮೂಲಕ ಯುವ ಕಾಂಗ್ರೆಸ್‌ನಲ್ಲಿ ಮಿಂಚಿನ ಸಂಚಾರ ಉಂಟು ಮಾಡಿದ್ದಾರೆ. ಈಗ ರಮ್ಯಾ ಅವರು ಪ್ರದೇಶ ಯುವ ಕಾಂಗ್ರೆಸ್‌ನ ಸಾರಥ್ಯ ವಹಿಸಲು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿಬಂದಿವೆ.

  ಯುವ ಕಾಂಗ್ರೆಸ್‌ನ ಚುನಾವಣಾ ನೀತಿಸಂಹಿತೆ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಎರಡು ಲಕ್ಷ ಸದಸ್ಯರನ್ನು ಸೇರಿಸಬೇಕು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಇರಬೇಕಾದ ಪ್ರಮುಖ ಅರ್ಹತೆ ಇದು. ರಮ್ಯಾ ಈಗಾಗಲೆ ಈ ಸಂಖ್ಯೆಯನ್ನು ಸುನಾಯಾಸವಾಗಿ ದಾಟಿದ್ದಾರೆ. ಇನ್ನೇನಿದ್ದರೂ ಸ್ಪರ್ಧೆಯೊಂದೇ ಬಾಕಿ ಎನ್ನುತ್ತಿವೆ ಮೂಲಗಳು.

  ಅನುಭವಸ್ಥರೇ ಆಗಿರಲಿ ಅಥವಾ ಹಿರಿಯ ಕಾಂಗ್ರೆಸ್ ಪುಡಾರಿಗಳ ಮಕ್ಕಳೇ ಆಗಿರಲಿ ಎರಡು ಲಕ್ಷ ಸದಸ್ಯರ ಹೆಸರನ್ನು ಯುವ ಕಾಂಗ್ರೆಸ್‌ಗೆ ನೋಂದಾಯಿಸಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎನ್ನುತ್ತಿದ್ದಾರೆ ರಾಹುಲ್ ಗಾಂಧಿ. ಈ ಟಾರ್ಗೆಟ್ ಹಿರಿಯ ಕಾಂಗ್ರೆಸ್ ಪುಡಾರಿಗಳ ಮಕ್ಕಳಿಗೆ ನಿಜಕ್ಕೂ ದೊಡ್ಡ ಸವಾಲಿನಂತೆ ಪರಿಣಮಿಸಿದೆ.

  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ತಮ್ಮ ಅಭಿಮಾನಿಗಳು ಕೈಬಿಡಲ್ಲ ಎಂಬ ನಂಬಿಕೆ ರಮ್ಯಾಗೆ ಇದೆಯಂತೆ. ಈಗಾಗಲೆ ರಮ್ಯಾಗೆ ಪ್ರತಿಸ್ಪರ್ಧಿಯಾಗಿ ಹಲವಾರು ರಾಜಕೀಯ ಮುಖಂಡರ ಪುತ್ರರೂ ಕಣದಲ್ಲಿದ್ದಾರೆ. ರಾಜಕೀಯದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ರಮ್ಯಾ ಆಟ ಇಲ್ಲಿ ನಡೆಯುತ್ತದೋ ಇಲ್ಲವೋ ಎಂಬ ಕದನ ಕುತೂಹಲವಂತೂ ಇದ್ದೇ ಇದೆ.

  English summary
  Golden girl Ramya made big headlines after she announced her entry into Youth Congress. The latest buzz about the Kannada actress that is set to contest for the president of State Youth Congress. According to sources, sons of many senior political leaders are in field and Ramya is said to compete with them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X