For Quick Alerts
  ALLOW NOTIFICATIONS  
  For Daily Alerts

  ಪರಮಾತ್ಮನಿಗೆ ಹೆದರಿ ಹಿಂದೇಟು ಹಾಕಿದ ವಿಷ್ಣುವರ್ಧನ

  By Rajendra
  |

  ಶೀರ್ಷಿಕೆ ವಿವಾದದಿಂದ ತಮ್ಮ ವಿಷ್ಣುವರ್ಧನ ಚಿತ್ರಕ್ಕೆ ಒಂದಷ್ಟು ಪ್ರಚಾರಗಿಟ್ಟಿಸಿಕೊಂಡ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ಇನ್ನೂ ಏಕೆ ಚಿತ್ರವನ್ನು ತೆರೆಗೆ ಬಿಡಲು ಮೀನಮೇಷ ಎಣಿಸುತ್ತಿದ್ದಾರೆ? ಸದ್ಯಕ್ಕೆ ದ್ವಾರಕೀಶ್ ಚಿತ್ರಮಂದಿರದ ಕಡೆ ತಲೆಹಾಕಿ ಮಲಗುವ ಸ್ಥಿತಿಯಲ್ಲಿಲ್ಲ. ಕಾರಣ 'ಪರಮಾತ್ಮ'.

  ವಿಷ್ಣುವರ್ಧನ ಚಿತ್ರ ಬಿಡುಗಡೆ ಮಾಡಲಿಕ್ಕೆ ಹೇಳಿಕೇಳಿ ಈಗ ಸೂಕ್ತ ಸಮಯವಲ್ಲ. ಯೋಗರಾಜ್ ಭಟ್ಟರ ಪರಮಾತ್ಮ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ಸೆ.30 ಅಂದುಕೊಂಡಿದ್ದ ಚಿತ್ರ ಇನ್ನೂ ಎರಡು ಮೂರು ವಾರ ಮುಂದಕ್ಕೆ ಹೋಗಿದೆ. ಈ ಸಮಯದಲ್ಲಿ ವಿಷ್ಣುವರ್ಧನ ಬಿಡುಗಡೆಯಾದರೆ ತಾಚಿಕೊಳ್ಳುವುದು ಗ್ಯಾರಂಟಿ ಎಂದು ದ್ವಾರ್ಕಿ ಮಗ ಯೋಗೀಶ್ ಗಾಂಧಿನಗರದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರಂತೆ.

  ಪರಮಾತ್ಮ ಬಿಡುಗಡೆಯಾದ ಮೇಲೆ ತಮ್ಮ ಚಿತ್ರ ಬಿಡುಗಡೆ ಮಾಡುವುದಾಗಿ ಯೋಗೀಶ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಲವೊಂದು ಹೊಸ ಅರ್ಥಗಳೂ ಹುಟ್ಟುಕೊಂಡಿವೆ. ಪರಮಾತ್ಮ ಬಿಡುಗಡೆಗೂ ವಿಷ್ಣುವರ್ಧನ ಹಿಂದೇಟಿಗೂ ಏನು ಸಂಬಂಧ. ಸುದೀಪ್ ಮಾರುಕಟ್ಟೆ ಮೇಲೆ ದ್ವಾರ್ಕಿಗೆ ನಂಬಿಕೆ ಇಲ್ಲವೆ? ವಿಷ್ಣು ಟೈಟಲ್ ವಿವಾದ ತಣ್ಣಗಾಯಿತು ಎಂಬ ಉಡಾಫೆಯೆ? ಆ ಪರಮಾತ್ಮನಿಗೇ ಗೊತ್ತು. (ಏಜೆನ್ಸೀಸ್)

  English summary
  Sudeep starer upcoming film Vishnuvardhana is all set to release. But the latest news is that, this film is not going to release in the month of October because another big budget movie Paramathma are releasing. So the film's producer Dwarakish planning to release after Paramathma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X